ವಿಟ್ಲ;ಖಾಸಗಿ ಸಂಸ್ಥೆಯಲ್ಲಿ ಅನ್ಯಕೋಮಿನ ವಿದ್ಯಾರ್ಥಿಗಳಿಬ್ಬರ ಪ್ರೇಮಪ್ರಕರಣ ಬಯಲಾಗಿ ಉಂಟಾದ ಗೊಂದಲದಿಂದ ಪ್ರಾಂಶುಪಾಲರು 10 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿರುವ ಬಗ್ಗೆ ವರದಿಯಾಗಿದೆ. ದ್ವಿತೀಯ ಪಿಯುಸಿಲ್ಲಿ ಓದುತ್ತಿದ್ದ ಕೇಪು ಮೂಲದ ವಿದ್ಯಾರ್ಥಿನಿ, ಕೆಲಿಂಜ ಮೂಲದ ಮುಸ್ಲಿಂ ವಿದ್ಯಾರ್ಥಿಗೆ ಪೇಮಪತ್ರ ಬರೆದಿದ್ದಳು ಎನ್ನಲಾಗಿದೆ.
ಇದನ್ನು ತಿಳಿದು ಎರಡೂ ಕೋಮಿನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಿಸಿದ್ದರು ಎನ್ನಲಾಗಿದೆ.ಇದರಿಂದ ಪ್ರಾಂಶುಪಾಲರು ಶಿಸ್ತು ಕ್ರಮದ ಭಾಗವಾಗಿ ಎರಡೂ ಕಡೆಯ 10 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿ ಆದೇಶ ನೀಡಿರುವ ಬಗ್ಗೆ ವರದಿಯಾಗಿದೆ.