ಒಂದೆಡೆ ಮದುವೆ, ಮತ್ತೊಂದೆಡೆ ಮಾರಾಮಾರಿ- ವೈರಲ್ ವಿಡಿಯೋ ನೋಡಿ

ಮುಂಬೈ: ವೇದಿಕೆಯಲ್ಲಿ ಮದುವೆ ಕಾರ್ಯಕ್ರಮ ಒಂದೆಡೆ ನಡೆಯುತ್ತಿದ್ದು, ಮತ್ತೊಂದು ಕಡೆ ಬಂಧು ಮಿತ್ರರ ನಡುವೆ ಗಲಾಟೆಯಾಗುತ್ತಿದೆ. ಮದುವೆ ಮಂಟಪದಲ್ಲಿ ಬಂಧುಗಳ ನಡುವೆ ಕೈ-ಕೈ ಮಿಲಾಯಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇನ್ಸ್ಟಾಗ್ರಾಂನಲ್ಲಿ ಆರ್ ಕೆ ರಾಜ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ವೇದಿಕೆಯಲ್ಲಿ ವಧು ವರರು ನಿಂತಿರುವುದನ್ನು ಕಾಣಬಹುದು. ಇದೇ ವೇಳೆ ವೇದಿಕೆಯ ಕೆಳಗೆ ಜನಸಂದಣಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಗುಂಪೊಂದು ಹೊಡೆದಾಟದಲ್ಲಿ ತೊಡಗಿರುವುದನ್ನು ಕಾಣಬಹುದು. ಈ ಅತಿಥಿಗಳು ದೈಹಿಕವಾಗಿ ನೂಕಾಟ- ತಳ್ಳಾಟಗಳಲ್ಲಿ ತೊಡಗಿರುವುದನ್ನು ಕಾಣಬಹುದು.

ಇನ್ನು ಈ ಗಲಾಟೆ ಮದುವೆ ಎಲ್ಲಿ ನಡೆದಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ ಈ ವಿಡಿಯೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

https://www.instagram.com/rajuraj2794/?utm_source=ig_embed&ig_rid=7eb94be6-81f5-4816-bd6d-13035ca26e7d

Check Also

ಮುತ್ತೂರು: ಕೊಳವೂರು ಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ …

Leave a Reply

Your email address will not be published. Required fields are marked *

You cannot copy content of this page.