ಉತ್ತರಖಂಡ್: ಸಂಭ್ರಮದಲ್ಲಿರುವಾಗಲೇ ಹಠಾತ್ ಹೃದಯಾಘಾತಗಳು ಸಂಭವಿಸಿ ಕುಸಿದು ಬಿದ್ದು ಮೃತಪಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಇಂಥದ್ದೇ ಮತ್ತೊಂದು ಘಟನೆ ಉತ್ತರಾಖಂಡ್ ನ ಅಲ್ಮೋರಾದಲ್ಲಿ ಭಾನುವಾರ (ಡಿ.11 ರಂದು) ನಡೆದಿದೆ.
ತನ್ನ ಮಗಳ ಮೆಹೆಂದಿಯಲ್ಲಿ ಸಂಬಂಧಿಕರೊಂದಿಗೆ ವಧುವಿನ ತಂದೆ ಸಂತಸದಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡು ಕುಟುಂಬಸ್ಥರು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ವೈದ್ಯರು ಹೇಳಿದ್ದಾರೆ.
ಕೆಲವು ಕುಟುಂಬಸ್ಥರು ಮದುವೆ ನಡೆಯಲಿದ್ದ ಹಲ್ದ್ವಾನಿ ಪ್ರದೇಶಕ್ಕೆ ತೆರಳಿದ ಬಳಿಕ ಈ ಘಟನೆ ನಡೆದಿದೆ. ಇದಾದ ಬಳಿಕ ತಂದೆಯ ನಿಧನದ ನಂತರ ಮದುವೆ ಸಮಾರಂಭ ಸರಳವಾಗಿ ನೆರವೇರಿದೆ. ಸೋದರ ಮಾವ ಕನ್ಯದಾನವನ್ನು ಮಾಡಿದ್ದಾರೆ.