ಮಗಳ ಮೆಹೆಂದಿ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗಲೇ ಕುಸಿದು ಬಿದ್ದು ತಂದೆ ಮೃತ್ಯು

ತ್ತರಖಂಡ್: ಸಂಭ್ರಮದಲ್ಲಿರುವಾಗಲೇ ಹಠಾತ್‌ ಹೃದಯಾಘಾತಗಳು ಸಂಭವಿಸಿ ಕುಸಿದು ಬಿದ್ದು ಮೃತಪಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಇಂಥದ್ದೇ ಮತ್ತೊಂದು ಘಟನೆ ಉತ್ತರಾಖಂಡ್‌ ನ ಅಲ್ಮೋರಾದಲ್ಲಿ ಭಾನುವಾರ (ಡಿ.11 ರಂದು) ನಡೆದಿದೆ.

ತನ್ನ ಮಗಳ ಮೆಹೆಂದಿಯಲ್ಲಿ ಸಂಬಂಧಿಕರೊಂದಿಗೆ ವಧುವಿನ ತಂದೆ ಸಂತಸದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡು ಕುಟುಂಬಸ್ಥರು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ವೈದ್ಯರು ಹೇಳಿದ್ದಾರೆ.

ಕೆಲವು ಕುಟುಂಬಸ್ಥರು ಮದುವೆ ನಡೆಯಲಿದ್ದ ಹಲ್ದ್ವಾನಿ ಪ್ರದೇಶಕ್ಕೆ ತೆರಳಿದ ಬಳಿಕ ಈ ಘಟನೆ ನಡೆದಿದೆ. ಇದಾದ ಬಳಿಕ ತಂದೆಯ ನಿಧನದ ನಂತರ ಮದುವೆ ಸಮಾರಂಭ ಸರಳವಾಗಿ ನೆರವೇರಿದೆ. ಸೋದರ ಮಾವ ಕನ್ಯದಾನವನ್ನು ಮಾಡಿದ್ದಾರೆ.

Check Also

ಜುಲೈ.23ರಂದು 2024-25ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ( Union Budget ) ಜುಲೈ 23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ತಿನ …

Leave a Reply

Your email address will not be published. Required fields are marked *

You cannot copy content of this page.