ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳೆಂಬ ಕಾರಣಕ್ಕೆ ಮಗಳ ಕತ್ತನ್ನೇ ಕೊಯ್ದು ತಂದೆ..!

ಚಿಕ್ಕಬಳ್ಳಾಪುರ: ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳೆಂಬ ಕಾರಣಕ್ಕೆ ಮುದ್ದು ಮಗಳ ಕತ್ತನ್ನೇ ಕೊಯ್ದು ತಂದೆ ಕೊಲೆ ಮಾಡಿದ ಘಟನೆ ಬುಧವಾರ ತಡರಾತ್ರಿ ದೇವನಹಳ್ಳಿಯ ಬಿದಲೂರು ಗ್ರಾಮದಲ್ಲಿ ನಡೆದಿದೆ.

ಕವನ (20) ಮೃತ ದುರ್ದೈವಿ ಯುವತಿಯಾಗಿದ್ದಾಳೆ, ಆರೋಪಿ ತಂದೆ ಮಂಜುನಾಥ್ (47) ಕೊಲೆ ಮಾಡಿ ಪೋಲಿಸರಿಗೆ ಶರಣಾಗಿದ್ದಾನೆ. ಮಗಳು ಪ್ರೀತಿ ಮಾಡುತ್ತಿದ್ದ ವಿಷಯ ತಿಳಿದು ಆಕ್ರೋಶಗೊಂಡಿದ್ದ ಚಿಕನ್ ಅಂಗಡಿ ಇಟ್ಟುಕೊಂಡಿದ್ದ ತಂದೆ ಮಂಜುನಾಥ್ ಕೋಳಿ ಕತ್ತರಿಸುವ ಕತ್ತಿಯಿಂದಲೇ ಮಗಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ,

ಸ್ಥಳಕ್ಕೆ ವಿಶ್ವನಾಥಪುರ ಪೋಲಿಸರು ಭೇಟಿ ಪರಿಶೀಲಿಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮಂಜುನಾಥ್‌ ಕಿರಿಯ ಮಗಳು ಪ್ರೀತಿಸಿ ಬೇರೊಬ್ಬ ಯುವಕನೊಂದಿಗೆ ಪರಾರಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಹಿರಿಯ ಮಗಳ ಜೊತೆ ತಡರಾತ್ರಿ ಗಲಾಟೆ ನಡೆದಿತ್ತು. ಚಿಕ್ಕವಳು ಓಡಿ ಹೋದಳು, ನೀನೂ ಸಹ ಅನ್ಯಜಾತಿ ಯವಕನನ್ನ ಪ್ರೀತಿ ಮಾಡ್ತಿದ್ದೀಯಾ? ನಾವು ಊರಲ್ಲಿ ಹೇಗೆ ಮರ್ಯಾದೆಯಿಂದ ಒಡಾಡಬೇಕು  ತಾ ಮಗಳನ್ನ ಕೊಂದೇಬಿಟ್ಟಿದ್ದಾನೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

Check Also

ನಾಳೆ (ಜು.20) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ …

Leave a Reply

Your email address will not be published. Required fields are marked *

You cannot copy content of this page.