ಬಜಪೆ : ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸುಮಾರು 7 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದ ಘಟನೆ ಕಟೀಲು – ಬಜಪೆ ರಾಜ್ಯಹೆದ್ದಾರಿ ಎಕ್ಕಾರು ಬಳಿ ಇಂದು ನಡೆದಿದೆ.
ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹೆದ್ದಾರಿಯಂಚಿನಲ್ಲಿನ ಸುಮಾರು 7 ಕಂಬಗಳು ಬಿದ್ದಿದ್ದು,ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಘಟನೆಯಿಂದಾಗಿ ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟವಾಗಿದೆ. ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು,ಪರೀಶೀಲನೆ ನಡೆಸಿದ್ದಾರೆ. ಈಗಾಗಲೇ ವಿದ್ಯುತ್ ಕಂಬಗಳ ಸಹಿತ ತಂತಿಗಳ ಜೋಡಣಾ ಕಾರ್ಯವು ಭರದಿಂದ ನಡೆಯುತ್ತಿದೆ. ಇನ್ನು ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಕಾರು ನಜ್ಜು ಗುಕಾರಿನಲ್ಲಿ ಮೂವರು ಇದ್ದು,ಇಬ್ಬರಿಗೆ ಗಾಯಗಳಾಗಿದ್ದು,ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.