March 13, 2026
WhatsApp Image 2023-02-12 at 9.58.19 AM

ರಾಯಚೂರು : ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಇಬ್ಬರು ಮಕ್ಕಳನ್ನು ತಂದೆಯೇ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಕ್ಕಲದೊಡ್ಡಿ ಗ್ರಾಮದಲ್ಲಿ ನಡೆದಿದೆ.

ದೇವದುರ್ಗ ತಾಲೂಕಿನ ಜಕ್ಕಲದೊಡ್ಡಿ ಗ್ರಾಮದ ನಿಂಗಪ್ಪ ತನ್ನ ಪತ್ನಿ ಪ್ರಭಾವತಿ ಮೇಲೆ ಅನುಮಾನ ಪಡುತ್ತಿದ್ದ.

ಹೀಗಾಗಿ ಪತ್ನಿಯ ಶೀಲ ಶಂಕಿಸಿ ತನ್ನ ಮಕ್ಕಳನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ನಿನ್ನೆ ನಿಂಗಪ್ಪ ತನ್ನ ಮಕ್ಕಳಾದ ಶಿವರಾಜ್ (5) ಹಾಗೂ ರಾಜು (3) ಅಜ್ಜ, ಅಜ್ಜಿಯನ್ನು ಭೇಟಿ ಮಾಡಿಸುವುದಾಗಿ ಹೇಳಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ನಿಂಗಪ್ಪನನ್ನು ದೇವದುರ್ಗ ಪೊಲೀಸರು ಬಂಧಿಸಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.