16 ವರ್ಷಗಳ ನಂತರ ಕಳ್ಳನನ್ನು ಹಿಡಿದ ಪೊಲೀಸರು. ಎರಡು ಚಿನ್ನದ ಹಲ್ಲುಗಳ ಕಾರಣದಿಂದಲೇ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳ ..!

ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಚಾಣಾಕ್ಷತನದಿಂದ ಹಿಡಿದಿದ್ದಾರೆ. ನಾವು ಇಂತಹ ಒಂದು ಘಟನೆಗಳನ್ನು ಸಿನಿಮಾದಲ್ಲಿ ನೋಡಿರ್ತೀವಿ. ಆದರೆ ನಿಜ ಜೀವನದಲ್ಲೂ ಕೂಡ 10 – 15 ವರ್ಷಗಳು ಕಳೆದ ನಂತರ ಕಳ್ಳನನ್ನು ಪೊಲೀಸರು ಹಿಡಿದಿರುವ ಘಟನೆ ನಡೆದಿದೆ. 16 ವರ್ಷಗಳ ಹಿಂದೆ ಸೇಲ್ಸ್ ಮೇನ್ ಆಗಿದ್ದ ಪ್ರವೀಣ್ ಜಡೇಜಾ ಎಂಬ ವ್ಯಕ್ತಿ ಕಳ್ಳತನದ ಆರೋಪ ಮಾಡಿದ್ದ.

16 ವರ್ಷಗಳ ಹಿಂದೆ ಪ್ರವೀಣ್ ಜಡೇಜಾ ಗೆ 24 ವರ್ಷ ವಯಸ್ಸಾಗಿತ್ತು. ಈತ ಸೇಲ್ಸ್ ಮೆನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ.  ಹಿದ್ಮಾತಾ ಮೂಲದ ಬಟ್ಟೆ ವ್ಯಾಪಾರಿ ಎಚ್. ಗಂಗಾರ್ ಬಳಿ ಪ್ರವೀಣ್ ಜಡೇಜಾ ಕೆಲಸಕ್ಕೆ ಸೇರಿಕೊಂಡಿದ್ದ. ಬಟ್ಟೆ ವ್ಯಾಪಾರಿ ಎ. ಎಚ್ . ಗಂಗಾರ್ ಪ್ರವೀಣ್ ಗೆ ಕೆಲವು ಬಟ್ಟೆ ಅಂಗಡಿಗಳಿಂದ ಹಣವನ್ನು ವಸೂಲಿ ಮಾಡಿಕೊಂಡು ಬರುವ ಕೆಲಸವಯಸಿದ್ದ.

ಎಲ್ಲಾ ಅಂಗಡಿಗಳಿಂದ ಜಡೇಜಾ 40,000ಗಳನ್ನು ಸಂಗ್ರಹಿಸಿಕೊಂಡ.. ನಂತರ ಹಿಂತಿರುಗಿ ಬಂದು ಅವನಿಗೆ ಕೆಲಸ ನೇಮಿಸಿದ್ದ ಎ. ಎಚ್ . ಗಂಗಾರ್ ಬಳಿ ಬಂದು ..”ನಾನು 40,000 ರೂ ಗಳನ್ನು ತೆಗೆದುಕೊಂಡು ಬರುತ್ತಿರುವಾಗ ಕಳ್ಳರು ನಗದು ಬ್ಯಾಗನ್ನು ಕದ್ದುಕೊಂಡು ಹೋಗಿದ್ದಾರೆ. ಎಂದು ಸುಳ್ಳು ಹೇಳಿದ. ಜಡೇಜಾ ಮೇಲೆ ಏನೋ ಸಂಶಯ ಬಂದು ಗಂಗಾರ್ ಪೊಲೀಸರಿಗೆ ದೂರು ಕೊಟ್ಟ. ತನಿಖೆಯನ್ನು ಕೈಗೆತ್ತಿಕೊಂಡ ರಫಿ ಅಹ್ಮದ್ ಕಿದ್ವಾಯಿ ಮಾರ್ಗದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದರು.

ತದನಂತರ ಜಡೇಜಾ ಸುಳ್ಳು ಹೇಳುತ್ತಿದ್ದಾನೆಂದು ಕಂಡು ಹಿಡಿದರು. ತದನಂತರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 408 (ಸೇವಕರಿಂದ ಕ್ರಿ ಮಿನಲ್ ನಂಬಿಕೆ ಉಲ್ಲಂಘನೆ )ಅಡಿಯಲ್ಲಿ ಪ್ರಕರಣ ದಾಖಲಿಸಿದರು. ಪೊಲೀಸರು ಈತನನ್ನು ಬಂಧಿಸಿದರು. ಪೊಲೀಸರು ಜಟಿಜನನ್ನು ಬಂಧಿಸಿದ ತಕ್ಷಣವೇ ಜಡೇಜಾ ಜಾಮೀನು ಪಡೆದು ಹೊರಗಡೆ ಬಂದ.. ನಂತರ ಜಡೇಜಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿಲ್ಲ.

ನ್ಯಾಯಾಲಯದ ವಿಚಾರಣೆಗೆ ಗೈರು ಹಾಕಿ ತಪ್ಪಿಸಿ ಕೊಂಡ. ಮುಂಬೈನಿಂದ ಕಣ್ಮರೆಯಾದ ದಾದರ್ ನ್ಯಾಯಾಲಯ ಜಡೇಜನನ್ನು ತಲೆಮರೆಸಿಕೊಂಡವನೆಂದು ಘೋಷಣೆ ಮಾಡಿತು. ಮತ್ತು ಅವನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತು. ಆ ದಿನದಿಂದ ಪೊಲೀಸರು ಈತನನ್ನು ಪ್ರತಿದಿನ ಕೂಡ ಹುಡುಕುತ್ತಿದ್ದರು. ಸುಮಾರು 16 ವರ್ಷಗಳ ಕಳೆದ ನಂತರ ಜಡೇಜಾನ ಸಹೋದ್ಯೋಗಿಯ ಸಹಾಯದಿಂದ ಪೊಲೀಸರು ಜಡೇಜಾ ನಾನು ಹಿಡಿದಿದ್ದಾರೆ.

ಜಡೇಜಾ 25 ವರ್ಷಗಳ ಹಿಂದೆಯೆ ಆತನ ಎರಡು ಬಂಗಾರದ ಹಲ್ಲುಗಳನ್ನು ಇಂಪ್ಲಾಂಟ್‌ ಮಾಡಿಸಿಕೊಂಡಿದ್ದ. ಇವನು ಹಲ್ಲುಗಳನ್ನು ಇಂಪ್ಲಾಂಟ್ ಮಾಡಿಸಿಕೊಂಡಿದ್ದ ವಿಷಯ ಮತ್ತು ಆತನ ಹೆಸರು  ಪೊಲೀಸರ ದಾಖಲೆಯಲ್ಲಿತ್ತು. ಇದನ್ನು ಆಧರಿಸಿಯೇ ಪೊಲೀಸರು ಈತನನ್ನು ಹಿಡಿಯಲು ಬಲೆ ಬೀಸಿದ್ದರು. ಕೊನೆಗೆ ಬಂಗಾರದ ಹಲ್ಲು ಹಾಕಿಸಿಕೊಂಡ ವ್ಯಕ್ತಿಯ ಬಗ್ಗೆ ಆತನ ಸಹೋದ್ಯೋಗಿಯು ಮಾಹಿತಿ ನೀಡಿದ.

ನಿಮ್ಮ ವಿಮಾ ಪಾಲಿಸಿಯು ಪ್ರಬುದ್ಧವಾಗಿದೆ ಅದನ್ನು ಪಡೆಯಲು ಮುಂಬೈಗೆ ಬರಬೇಕೆಂದು ಜಡೇಜಾ ಗೆ ಆತನ ಮಾಜಿ ಸಹೋದ್ಯೋಗಿಯ ಮೂಲಕ ಸಂದೇಶ ಕಳಿಸಿದರು. ನೀಡಿದ ಮಾಹಿತಿ ಮೇರೆಗೆ ಚಡೇಜ ಮುಂಬೈಗೆ ಬರುತ್ತಾನೆ ಮತ್ತು ಅಲ್ಲಿ ಅವನನ್ನು ಪೊಲೀಸರು ಹಿಡಿದಿದ್ದಾರೆ.

Check Also

ಉಡುಪಿ: ಬಾವಿ ಸ್ವಚ್ಛ ಮಾಡಲು ಇಳಿದ ಇಬ್ಬರು ವ್ಯಕ್ತಿಗಳಲ್ಲಿ ಓರ್ವ ಮೃತ್ಯು

ಉಡುಪಿ: ಬಾವಿ ಸ್ವಚ್ಛ ಮಾಡಲು ಇಳಿದ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಸಾವನ್ನಪ್ಪಿದರೆ ಮತ್ತೊಬ್ಬನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ …

Leave a Reply

Your email address will not be published. Required fields are marked *

You cannot copy content of this page.