

ಉಡುಪಿ: ಮುಳ್ಳಿಕಟ್ಟೆಯಿಂದ ಕುಂದಾಪುರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ 24 ಗ್ರಾಂ ತೂಕದ, 1.20 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿಯನ್ನು ಯಾರೋ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಕುಂದಬಾರಂದಾಡಿ ಗ್ರಾಮದ ಸಾಕು (50) ಅವರು ಮುಳ್ಳಿಕಟ್ಟೆಯಲ್ಲಿ ಖಾಸಗಿ ಬಸ್ಸಿಗೆ ಬೆಳಗ್ಗೆ 8 ಗಂಟೆಗೆ ಹತ್ತಿದ್ದು, 8.20 ಕ್ಕೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಬಸ್ಸಿನಿಂದ ಇಳಿದಾಗ ಕುತ್ತಿಗೆಯಲ್ಲಿ ಧರಿಸಿದ್ದ ಚಿನ್ನದ ಸರ ಕಳವಾಗಿದೆ.
ಇವರು ಕುಂದಾಪುರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಸಗಿಯಾಗಿ ಕೆಲಸ ಮಾಡುತ್ತಿದ್ದು, ಸೆ.10ರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬರುತ್ತಿದ್ದ ವೇಳೆ ಬಸ್ಸಿನಲ್ಲಿ ಯಾರೋ ಇವರ ಚಿನ್ನದ ಕರಿಮಣಿಯನ್ನು ಕಳವುಗೈದಿರುವುದಾಗಿದೆ ಎಂದು ತಿಳಿಯಲಾಗಿದೆ.
ಸಾಕು ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.