ಮಂಗಳೂರು: ಹಿಂದೂ ಯುವತಿ 15 ಕ್ರಿಮಿನಲ್‌ ಪ್ರಕರಣಗಳ ಆರೋಪಿ ಮುಸ್ಲಿಂ ಯುವಕನ ಜತೆ ಪರಾರಿ ?

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಯುವಕನೊಬ್ಬ ತನ್ನ ಬೆಂಬಲಿಗರ ಸಹಾಯದಿಂದ ನನ್ನ ಮಗಳನ್ನು ಉಳ್ಳಾಲದಿಂದ ಅಪಹರಿಸಿದ್ದು, ವಿವಾಹವಾಗುವ ಉದ್ದೇಶದಿಂದ ಆಕೆಯನ್ನು ಮುಸ್ಲಿಂ ಮತಕ್ಕೆ ಮತಾಂತರಗೊಳಿಸಲು ಯತ್ನಿಸಿರುವುದಾಗಿ ಕೇರಳ ಮೂಲದ ಪೋಷಕರೊಬ್ಬರು ಮಂಗಳೂರು ಪೊಲೀಸ್ ಕಮೀಷನರಿಗೆ ದೂರು ನೀಡಿದ್ದಾರೆ. ಕಾಸರಗೋಡಿನ ಇಸ್ಸಾತ್ ನಗರದ ಅಸ್ಪಾಕ್ ಮಗಳನ್ನು ಅಪಹರಿಸಿದವ ಎಂದು ದೂರಿನಲ್ಲಿ ತಿಳಿಸಿದ್ದಾನೆ. ದೂರುದಾರರು ಕಾಸರಗೋಡಿನವರಾಗಿದ್ದು, ಅವರ ಸಹೋದರಿಯನ್ನು ಉಳ್ಳಾಲದ ಬಂದಿಕೊಟ್ಯಾಕ್ಕೆ ವಿವಾಹ ಮಾಡಿಕೊಡಲಾಗಿದೆ. ಅಪಹರಿಸಲ್ಪಟ್ಟಿದ್ದಾಳೆ ಎನ್ನಲಾಗುತ್ತಿರುವ ದೂರುದಾರರ ಮಗಳು(20 ವ) ಮಂಗಳೂರಿನ ಪಾಂಡೇಶ್ವರ ಶ್ರೀನಿವಾಸ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದು, ಉಳ್ಳಾಲದ ಅತ್ತೆಯ ಮನೆಯಿಂದ ಹೋಗಿ ಬರುತ್ತಿದ್ದಳು. ಆದರೇ ಹಣಕಾಸಿನ ಮುಗ್ಗಟ್ಟಿನಿಂದಾಗಿ ಆಕೆ ಅರ್ಧದಲ್ಲೆ ಓದು ಮೊಟಕುಗೊಳಿಸಿದ್ದಳು ಎಂದು ದೂರಿನಲ್ಲಿ ವಿವರಿಸಲಾಗಿದೆ.ತಿಂಗಳ ಹಿಂದೆ ಜೂ 4 ರಂದು ಅಸ್ಪಾಕ್ ಈಕೆಯನ್ನು ಕಾಸರಗೋಡಿನ ವಿದ್ಯಾನಗರದ ದೂರುದಾರರ ಮನೆಯಿಂದ ಅಪಹರಿಸಿದ್ದು, ವಿದ್ಯಾನಗರ ಪೊಲೀಸರ ಸೂಚನೆಯಂತೆ ವಾಪಸ್ಸು ಬಿಟ್ಟು ಕಳುಹಿಸಿದ್ದ. ಇದಾದ ಬಳಿಕ ಆಕೆಯನ್ನು ಮತ್ತೆ ಉಳ್ಳಾಲದ ಬಂದಿಕೊಟ್ಯಾದ ಅತ್ತೆ ಮನೆಗೆ ಕಳುಹಿಸಲಾಗಿದ್ದು, ಅಲ್ಲಿಂದ ಅಸ್ಪಾಕ್ ಆಕೆಯನ್ನು ತನ್ನ ಸಹಚರರ ಮೂಲಕ ಜೂ 30 ರಂದು ಅಪಹರಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಮತಾಂತರಕ್ಕೆ ಯತ್ನಪ್ರಸ್ತುತ ಅವರಿಬ್ಬರು ಕೇರಳದ ಕೊಚ್ಚಿಯಲ್ಲಿರುವುದಾಗಿ ಯುವತಿಯ ತಂದೆ ಆರೋಪಿಸಿದ್ದು, ಅಸ್ಪಾಕ್ ಅಕೆಯನ್ನು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸುತ್ತಿದ್ದು ಇದನ್ನು ತಡೆಯಬೇಕು ಎಂದು ಪೊಲೀಸ್ ಕಮೀಷನರ್ ನಲ್ಲಿ ಮನವಿ ಮಾಡಿದ್ದಾರೆ.15ಕ್ಕೂ ಹೆಚ್ಚು ಕೇಸ್ಯುವತಿಯನ್ನು ಅಪಹರಿಸಿರುವುದಾಗಿ ಆರೋಪಿಸಲಾಗುತ್ತಿರುವ ಅಸ್ಪಾಕ್ ಕ್ರಿಮಿನಲ್ ಹಿನ್ನಲೆ ಉಳ್ಳವನ್ನು ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ . ಆತನ ವಿರುದ್ದ ವಿವಿಧ ಠಾಣೆಗಳಲ್ಲಿ ಕಳೆದ 10 ವರ್ಷಗಳಲ್ಲಿ ಒಟ್ಟು 15 ಕೇಸ್ ಗಳು ದಾಖಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಕೃತ್ಯ ಎಂದು ಆರೋಪಿಸಿದ್ದಾರೆ. ಯುವತಿಗೆ 20 ವರ್ಷವಾಗಿದ್ದು ಆಕೆ ಯುವಕನ ಜತೆ ಸ್ವ ಇಚ್ಚೆಯಿಂದಲೇ ಹೋಗಿದ್ದಾಳೆಯೇ ? ಆಥಾವ ಆಕೆಯ ಹೆತ್ತವರು ಆರೋಪಿಸಿದಂತೆ ಅಪಹರಿಸಲ್ಪಟ್ಟಿದ್ದಾಳೆಯೇ ಎನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ. 15ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಜತೆ ಬಿಸಿಎ ವಿದ್ಯಾರ್ಥಿನಿ ಸ್ವ ಇಚ್ಚೆಯಿಂದ ಹೋಗಿರಬಹುದೇ ಎನ್ನುವುದು ಹಿಂದೂತ್ವವಾದಿ ಸಂಘಟನೆಗಳನ್ನು ಕಾಡುತ್ತಿರುವ ಪ್ರಶ್ನೆ

Check Also

ನಾಳೆ (ಜು.20) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ …

Leave a Reply

Your email address will not be published. Required fields are marked *

You cannot copy content of this page.