ಕೋಲಾರ: ಇತ್ತೀಚೆಗೆ ಅದೆಷ್ಟೋ ಮಂದಿ ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರನ್ನ ನೋಡಿ ಮರುಳಾಗುತ್ತಿದ್ದಾರೆ. ಹಾಗೇ ಅವರಿಂದ ಬೇಗನೆ ಮೋಸಕ್ಕೆ ಒಳಗಾಗುತ್ತಾರೆ. ಇದೀಗ ಇಲೊಂದು ಜಿಲ್ಲೆಯಲ್ಲಿ ಪತಿರಾಯನೊಬ್ಬ ಫೇಸ್ ಬುಕ್ ಸುಂದರಿಗಾಗಿ ತನ್ನ ಪತ್ನಿಗೆ ವಿಷವಿಟ್ಟ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕಾನಗಮಾಕಲಹಳ್ಳಿ ಗ್ರಾಮದಲ್ಲಿ ಪತಿರಾಯ ತನ್ನ ಹೆಂಡತಿಗೆ ವಿಷ ಹಾಕಿದ್ದಾನೆ. ಇದೀಗ ವಿಷ ಸೇವಿಸಿದ ಪತ್ನಿ ಸಾವು- ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.9 ವರ್ಷಗಳ ಹಿಂದೆ ಮದುವೆಯಾಗಿದ್ದ ಭೂಪನಿಗೆ ಫೇಸ್‍ಬುಕ್‍ನಲ್ಲಿ ಯುವತಿಯೊಬ್ಬಳ ಪರಿಚಯವಾಗಿದೆ.
ಈ ಪರಿಚಯವು ಇದೀಗ ತನ್ನ ಪತ್ನಿಯನ್ನೇ ಮರೆಯುವಂತೆ ಮಾಡಿದೆ.ತವರು ಮನೆಗೆ ಪತ್ನಿ ಕಳುಹಿಸಿದ ಭೂಪ ತವರು ಮನೆಯಲ್ಲಿಯೇ ಪತ್ನಿಗೆ ವಿಷವಿಟ್ಟಿದ್ದಾನೆ. ಪರಿಣಾಮ ತೀವ್ರ ಅಸ್ವಸ್ಥಳಾಗಿರುವ ಪತ್ನಿ ಆಶಾರಾಣಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದು, ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.