December 5, 2025
WhatsApp Image 2025-11-10 at 5.21.30 PM

ಉಡುಪಿ: ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ನಡೆದ ಜಗಳ ಪ್ರಕರಣದಲ್ಲಿ ಮಣಿಪಾಲ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

ದಿನಾಂಕ 08-11-2025 ರಂದು ರಾತ್ರಿ 10 ಗಂಟೆಯ ಸಮಯದಲ್ಲಿ, ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಈಶ್ವನಗರದ ಬಳಿ ಇರುವ ಡೌನ್ ಟೌನ್ ಬಾರ್ & ರೆಸ್ಟೋರೆಂಟ್ ಎದುರು ಘಟನೆ ನಡೆದಿದೆ.

ಪೊಲೀಸ್ ವರದಿ ಪ್ರಕಾರ, ಚಂದನ್, ಅಮರ್ ಶೆಟ್ಟಿ, ಧನುಷ್, ನಿತೇಶ್, ಸುಜನ್ ಹಾಗೂ ನಿನಾದ್ ಅಜಯ್ ಎಂಬ ಯುವಕರು ಬಾರ್ನಲ್ಲಿ ಊಟ ಮಾಡುತ್ತಿರುವಾಗ, ಚಂದನ್ನ ಕೈ ಅಮರ್ ಶೆಟ್ಟಿಯ ಮೈಗೆ ತಾಗಿದ ಕಾರಣಕ್ಕೆ ಅವರ ಮಧ್ಯೆ ವಾಗ್ವಾದ ಉಂಟಾಗಿ, ನಂತರ ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ.

ಸದರಿ ಘಟನೆ ಸ್ಥಳದಲ್ಲಿದ್ದವರಿಂದ ಚಿತ್ರೀಕರಿಸಲ್ಪಟ್ಟು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ಬಗ್ಗೆ ರಾತ್ರಿ ಪೆಟ್ರೋಲ್ ಕರ್ತವ್ಯದಲ್ಲಿದ್ದ ಎ.ಎಸ್.ಐ ಮೋಹನ್ ದಾಸ್ ರವರು ನೀಡಿದ ದೂರಿನ ಮೇರೆಗೆ, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2025, ಕಲಂ 194(2) ಬಿ.ಎನ್.ಎಸ್ – 2023 ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಪೊಲೀಸರು ಆರೋಪಿತರಾದ ಅಮರ್ ಶೆಟ್ಟಿ, ಚಂದನ್ ಸಿ. ಸಾಲ್ಯಾನ್, ಧನುಷ್ ಮತ್ತು ಅಜಯ್ ಇವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.