ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಕಟೀಲು ಹೆದ್ದಾರಿಯ ಕಾಫಿಕಾಡು ರಾಮನಗರ ಎರಡನೇ ಅಡ್ಡರಸ್ತೆ ಬಳಿ ಹೆದ್ದಾರಿ ದಾಟುತ್ತಿದ್ದ ಮಹಿಳೆಯನ್ನು ರಕ್ಷಿಸಲು ಯತ್ನಿಸಿ ಆಟೋ ಚಾಲಕ ನಿಯಂತ್ರಣ ತಪ್ಪಿ, ಪಲ್ಟಿಯಾಗಿ ಮಹಿಳೆಯ ಮೇಲೆ ಬಿದ್ದ ಆಟೋವನ್ನು ಸಮೀಪದಲ್ಲಿದ್ದ ಪುಟ್ಟ ಬಾಲಕಿ ವೈಭವಿ ರವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಮ್ಮ ಕಚೇರಿಯಲ್ಲಿ ಗೌರವಿಸಿ ಬಾಲಕಿಯ ಸಾಹಸವನ್ನು ಶ್ಲಾಘಿಸಿದ್ದಾರೆ. ಕಿನ್ನಿಗೋಳಿ ರಾಜರತ್ನಾಪುರ ನಿವಾಸಿ ಮಹಿಳೆ ಚೇತನಾಗೆ (35) ಆಟೋ ಡಿಕ್ಕಿಯಾಗಿ ಪಲ್ಟಿಯಾಗಿ ಆಟೋದಡಿ ಬಿದ್ದಿದ್ದರು. ತಕ್ಷಣ ಮಹಿಳೆಯ ಮಗಳು,ಕಿನ್ನಿಗೋಳಿ ಸೆಂಟ್ರಲ್ ಶಾಲೆಯಲ್ಲಿ 7ನೇ ತರಗತಿಯ ವೈಭವಿ ಆಗಮಿಸಿ ಪಲ್ಟಿಯಾದ ರಿಕ್ಷಾವನ್ನು ಮೇಲೆತ್ತಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.