ಉಡುಪಿ: ಉಡುಪಿಯ ಸಂತೆಕಟ್ಟೆ ಬಳಿ ಕಾಮಗಾರಿ ಹಂತದಲ್ಲಿರುವ ಓವರ್ ಪಾಸ್ ಕಾಮಗಾರಿಯ ಬೃಹತ್ ಹೊಂಡದ ಒಂದು ಭಾಗ ಕುಸಿದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಮಳೆಗಾಲಕ್ಕೂ ಮುನ್ನ ಓವರ್ ಪಾಸ್ ಕಾಮಗಾರಿ ಪ್ರಾರಂಭಿಸಲಾಗಿತ್ತು. ಅದಕ್ಕಾಗಿ ಬೃಹತ್ ಹೊಂಡ ತೋಡಲಾಗಿತ್ತು. ಹೊಂಡದಲ್ಲಿ ಭಾರೀ ಪ್ರಮಾಣದ ಬಂಡೆ ಕಲ್ಲು ಕಂಡುಬಂದ ಕಾರಣ ಕಾಮಗಾರಿ ಬಹುತೇಕ ನಿಧಾನಗೊಂಡಿತ್ತು. ಬಳಿಕ ಭಾರೀ ಮಳೆಗೆ ಟಾರ್ಪಲ್ ಅಳವಡಿಕೆ ಮಾಡಲಾಗಿತ್ತು. ಆದರೆ ಇಂದು ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.