ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಮುಂದಿನ ಅಧ್ಯಕ್ಷರಾಗಿ ಯೋಗಿಶ್ ಶೆಟ್ಟಿ ಜಪ್ಪು ಬಹುತೇಕ ಖಚಿತ.. ?

ಸಂಪೂರ್ಣವಾಗಿ ತುಳುನಾಡಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಇತಿಹಾಸ ಸೃಷ್ಟಿಸಿದ ಏಕೈಕ ಹೋರಾಟಗಾರ ಯೋಗಿಶ್ ಶೆಟ್ಟಿ ಜಪ್ಪು ರವರು . ಕರ್ನಾಟಕ ಸರಕಾರದ ತುಳು ಸಾಹಿತ್ಯ ಅಕಾಡೆಮಿಯ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ತುಳು ಪರ ಹೋರಾಟಗಾರರಿಗೆ ಅವಕಾಶ ನೀಡುವ ಬಗ್ಗೆ ತುಳುನಾಡಿನಲ್ಲಿ ಬಾರಿ ಕೂತೂಹಲ ಕೆರಳಿಸಿದೆ. ಈ ನಿಟ್ಟಿನಲ್ಲಿ ತುಳುನಾಡಿನ ಜನಪ್ರಿಯ ಸಂಘಟನೆಯಾದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೇಶ್ ಶೆಟ್ಟಿ ಜಪ್ಪು ರವರ ಹೆಸರು ಭಾರೀ ಪ್ರಶಂಸೆ ಹಾಗೂ ಮುಂಚುಣಿ ಯಲ್ಲಿದೆ . ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ನಿರಂತರ ತುಳುನಾಡಿನ ನೆಲ ,ಜಲ ಹಾಗೂ ತುಳುನಾಡಿನ ಆಚಾರ, ವಿಚಾರ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚೇದ್ದಕ್ಕೆ ಸೇರ್ಪಡೆ ಹಾಗೂ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆನ್ನಾಗಿಸಬೇಕೆಂದು ಅಗ್ರಹವನ್ನು ಕಾನೂನು ರೀತಿಯಲ್ಲಿ ಹೋರಾಟ, ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹವನ್ನು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಾ ಬರುತ್ತಿದ್ದಾರೆ. ಇಂದು ನಾವೆಲ್ಲ ಬಳಸುತ್ತಿರುವ ಸೂರ್ಯ ಚಂದ್ರರ ಬಾವುಟ ವನ್ನು ಪ್ರಪ್ರಥಮವಾಗಿ ಸಮಾಜಕ್ಕೆ ಪರಿಚಯಿಸಿರುವಂತವರು ಯೋಗಿ ಶೆಟ್ಟಿ ಜಪ್ಪು ರವರು 2009 ರಲ್ಲಿ ಜಪ್ಪು ಮಹಾಕಾಳಿ ಪಡ್ಪು ನಲ್ಲಿ ರೈಲ್ವೆ ಗೇಟ್ ಬಳಿ ರೈಲ್ವೆ ಎದುರುಗಡೆ ರೈಲ್ವೆ ಅವ್ಯವಸ್ಥೆಯ ವಿರುದ್ಧ ಕಾರ್ಯಕ್ರಮ ಹಮ್ಮಿಕೊಂಡು ತುಳು ಬಾವುಟ ಪ್ರದರ್ಶಿದ ಆ ಸಂದರ್ಭದಲ್ಲಿ ಹೆಚ್ಚಿನವರಿಗೆ ತುಳು ಬಾವುಟ ಯಾವುದು ಎಂಬುದೇ ತಿಳಿದಿರಲಿಲ್ಲ ಬಳಿಕ 2013 ರಿಂದ ಬಾವುಟ ಗುಡ್ಡೆಯಲ್ಲಿ ಕೆದಂಬಾಡಿ ರಾಮೇಗೌಡ, ಬಂಗಾರಸ, ಉಪ್ಪಿನಂಗಡಿ ಮಂಜ ಸೇರಿದಂತೆ ಹಲವಾರು ಸ್ವಾತಂತ್ರ ಹೋರಾಟಗಾರರು ಏಪ್ರಿಲ್ 5 1837ರಂದು ಬಾವುಟ ಗುಡ್ಡೆಯಲ್ಲಿ ಅಂದಿನ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷ್ ಬಾವುಟವನ್ನ ಕಿತ್ತೊಗೆದು ತುಳು ಬಾವುಟವನ್ನ ಹಾಕಿದ್ದರು.


ಈ ದಿನ ವನ್ನು ನೆನಪಿಸುವ ಸಲುವಾಗಿ ಖ್ಯಾತ ಬರಹಗಾರರು ದಿವಂಗತ ಅರೆಭಾಷಾ ಅಕಾಡೆಮಿಯ ಅಧ್ಯಕ್ಷರು ಹಿರಿಯ ಸಾಹಿತಿ ದೇವಿ ಪ್ರಸಾದ್ ಸಂಪಾಜೆ,
ದಿ! ಕೂತ್ಕಾಡಿ ವಿಶ್ವನಾಥ ರೈ ಹರಿಕೃಷ್ಣ ಪುನನರೂರು ಅರವಿಂದ ಬೋಳೂರು, ಬೋಜರಾಜ್ ವಾಮಂಜೂರು ಸೇರಿದಂತೆ ಸರ್ವ ಸಂಘಟನೆಗಳನ್ನು, ಟೈಮ್ಸ್ ಆಫ್ ಕುಡ್ಲ ಪತ್ರಿಕೆ ಸೇರಿದಂತೆ ನೂರಾರು ಜನರನ್ನ ಸೇರಿಸಿಕೊಂಡು ಜನರನ್ನ ಬಾವುಟ ಗುಡ್ಡೆಯ ಪ್ರತಿವರ್ಷ ಏಪ್ರಿಲ್ 5 ರಂದು ನಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿ ಪ್ರತಿವರ್ಷ ಧ್ವಜಾರೋಹಣ ಹಾಗೂ ತುಳುನಾಡಿನ ವಿವಿಧ ಭಾಗಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೆನಪು ಕಾರ್ಯಕ್ರಮವನ್ನು ಮಾಡುವ ಮೂಲಕ ಇಂದು ಬಾವುಟ ಗುಡ್ಡೆಯಲ್ಲಿ ಸ್ವಾತಂತ್ರ್ಯ ಸ್ಮಾರಕ ಕೆದಂಬಡಿ ರಾಮೇಗೌಡರ ಪ್ರತಿಮೆ ಅನಾವರಣಗೊಳ್ಳಲು ಕೂಡ ಪ್ರಮುಖ ರೂವಾರಿಗಳಲ್ಲಿ ಒಬ್ಬರಾಗಿ ಕೆಲಸ ಮಾಡಿದವರು ಶ್ರೀ ಯೋಗಿಶ್ ಶೆಟ್ಟಿ ಜಪ್ಪು ಇಂದು ಈ ತುಳು ಬಾವುಟ ಮಹತ್ತರವಾಗಿ ಪ್ರಸರಿಸಲು ಯೋಗಿಶ್ ಶೆಟ್ಟಿ ಜಪ್ಪು ರವರ ಶ್ರಮ ಬಹಳ ಮುಖ್ಯ ವಾಗಿದೆ ಎಂಬುದು ನಾಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಇಂದು ಬೇರೆ ಬೇರೆ ಪಕ್ಷದವರು ತುಳು ಬಾವುಟ ತುಳುಶಾಲ್ ಹಲವಾರು ಭಾಗಗಳಲ್ಲಿ ಇಂದು ತುಳುನಾಡಿನ ಗೌರವವಾದ ಸಾಂಸ್ಕೃತಿಕ ಪ್ರತೀಕವಾಗಿರುವಂತ ತುಳುದ್ವಜವನ್ನ ತನ್ನ ಚುನಾವಣಾ ಕಚೇರಿಯ ಮೇಲೆ ಕೂಡ ಬಳಸುತ್ತಿರುವುದು ಇತ್ತೀಚಿನ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಗಾಡಿಗಳಲ್ಲಿ ಬಳಸುತ್ತಿರುವುದು ಕಂಡು ಬಂದಿರುವುದು ತುಳುವರಿಗೆ ಹೆಮ್ಮೆಯ ವಿಷಯವಾಗಿದೆ.

ತುಳು ಲಿಪಿಯ ಪ್ರಚಾರ ತುಳುನಾಡಿನ ಪರಂಪರೆ ಸಂಸ್ಕೃತಿಯನ್ನು ಜಗತ್ತಿನ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ 2019 ರಲ್ಲಿ ತುಳುನಾಡ ರಕ್ಷಣಾ ವೇದಿಕೆಯ ದಶಮಾನೋತ್ಸವ ಅಂಗವಾಗಿ ಎಂಬ ಮೂರು ದಿನಗಳ ವಿಶ್ವದ ಸಮ್ಮೇಳನವನ್ನು ಹಮ್ಮಿಕೊಂಡು ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ, ಸಂಗೀತ ನೃತ್ಯ ನಾಟಕ ತುಳುಸಿನೆಮಾ, ಪುಸ್ತಕ ಬಿಡುಗಡೆ, ಕರಕುಶಲ ಪ್ರದರ್ಶನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ದೇಶವಿದೇಶದ ಹಲವಾರು ಗಣ್ಯರನ್ನು ಸೇರಿಸಿ ಸಾಧಕ ಸನ್ಮಾನ, ತೌಳವರತ್ನ ,ತೌಳವ ಚಕ್ರವರ್ತಿ, ತೌಳವಸಿರಿ ಎಂಬ ಪ್ರಶಸ್ತಿಗಳನ್ನ ನೀಡಿ ಗೌರವಹಿಸುವ ಕೆಲಸವನ್ನ ಯೋಗಿಶ್ ಶೆಟ್ಟಿ ಜಪ್ಪು ಅವರ ನೇತೃತ್ವದಲ್ಲಿ ನಡೆದಿರುತ್ತದೆ 2021 ರಲ್ಲಿ ಕೋರೊನಾ ಲಾಕ್ಡೌನ್ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಪ್ರಮುಖ ಭಾಗಗಳಲ್ಲಿ ಆಹಾರ ಕಿಟ್ ವಿತರಣೆ ಹಾಗೂ ಮಂಗಳೂರಿನ ಕೆಲವು ಪ್ರಮುಖ ಪ್ರದೇಶಗಳಲ್ಲಿ ನಿರಂತರವಾಗಿ 62 ದಿನಗಳ ಕಾಲ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಅನ್ನದಾನ ಅನ್ನದಾನ ನೀಡಿದ್ದ ಕೀರ್ತಿ ಶ್ರೀ ಯೋಗಿಶ್ ಶೆಟ್ಟಿ ಜಪ್ಪು ಅವರಿಗೆ ಸಲ್ಲುತ್ತದೆ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ರಾಜ್ಯ ಯುವ ಸಾದಕ ಪ್ರಶಸ್ತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ತುಳು ಸಂಘ ರತ್ನ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರು ತುಳು ನಾಡು ನುಡಿಗೆ ಶ್ರಮಿಸುತ್ತಿರುವ ಯೋಗೇಶ್ ರವರನ್ನು ಜಗತ್ತಿನ ಅನೇಕ ಕಡೆಯಲ್ಲಿರುವ ತುಳುವರಾದ ನಾವೆಲ್ಲರೂ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಲು ಬೆಂಬಲಿಸಬೇಕಾಗಿದೆ. ಯಾಕೆಂದರೆ ತುಳು ಅಧಿಕೃತ ಭಾಷೆ, ತುಳು ಸಂವಿಧಾನದ ಎಂಟನೇ ಪರಿಚ್ಛೇದ ಕ್ಕೆ ಸೇರ್ಪಡೆ ಸೇರಿದಂತೆ ಪ್ರಮುಖ ಕೆಲಸಗಳು ಆಗಬೇಕಾಗಿದ್ದು ಜಾತಿ, ದರ್ಮ ಬೇಧ ವಿಲ್ಲದೇ ತಳಮಟ್ಟದಿಂದ ಮೂರು ದಶಕಗಳಿಂದ ನಿರಂತರ ದೀನ ದಲಿತರ ಪರ ಹೋರಾಡುವ ಯೋಗಿಶ್ ಶೆಟ್ಟಿ ಜಪ್ಪು ಯವರಂತಹ ಪ್ರಭಾವಿ ಹೋರಾಟಗಾರರ ಅಗತ್ಯವಿದೆ.

Check Also

ಬಂಟ್ವಾಳ: ಮಧ್ಯರಾತ್ರಿ ರಿಕ್ಷಾ ನಿಲ್ಲಿಸಿ ನಾಪತ್ತೆ! ದರ್ಶನ ಪಾತ್ರಿ ನದಿಗೆ ಹಾರಿರುವ ಶಂಕೆ|

ಬಂಟ್ವಾಳ : ಕುಕ್ಕಿಪಾಡಿ ಗ್ರಾಮದ ನಿವಾಸಿ ದರ್ಶನ ಪಾತ್ರಿ ಗಿರೀಶ್ ಎಂಬವರು ಕಾಣೆಯಾಗಿದ್ದಾರೆ ಎಂಬ ದೂರು ಪೂಂಜಲ್‌ಕಟ್ಟೆ ಠಾಣೆಯಲ್ಲಿ ಪ್ರಕರಣ …

Leave a Reply

Your email address will not be published. Required fields are marked *

You cannot copy content of this page.