ಕೊಚ್ಚಿ : ‘ವರಹಾರೂಪಂ’ ಹಾಡು ಒಳಗೊಂಡಿರುವ ತುಳುನಾಡ ದೈವಾಧಾರಿತ ಕಥೆಯ ಸೂಪರ್ ಹಿಟ್ ಚಲನಚಿತ್ರ ‘ಕಾಂತಾರ’ ಕ್ಕೆ ಮತ್ತೆ ವಿಘ್ನ ಎದುರಾಗಿದೆ.
‘ವರಹಾರೂಪಂ’ ಹಾಡು ಒಳಗೊಂಡಿರುವ ಸಿನಿಮಾ ಪ್ರದರ್ಶನ ಮಾಡಲು ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಾಪಿರೈಟ್ ಉಲ್ಲಂಘಿಸಿದ ಆರೋಪಕ್ಕೆ ಕಾಂತಾರ ಸಿನಿಮಾ ನಿರ್ದೇಶಕ , ನಟ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರು ಅವರಿಗೆ ನಿರೀಕ್ಷಣ ಜಾಮೀನು ಅನುಮತಿಸಿದ ನ್ಯಾಯಾಲಯ ಫೇಬ್ರವರಿ 12 ಮತ್ತು 13 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 1 ರ ವರೆಗೆ ತನಿಖಾಧಿಕಾರಿ ಮುಂದೆ ಹಾಜರಾಗುಂತೆ ಸೂಚಿಸಿದೆ. ಹೈಕೋರ್ಟ್ ಆದೇಶದಲ್ಲಿ ಏನಿದೆ..? ಕೇರಳ ಹೈಕೋರ್ಟ್ ನ ನ್ಯಾಯಮೂರ್ತಿ ಎ ಬದರುದ್ದೀನ್ ಅವರು “‘ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್‌ನಿಂದ ಮಧ್ಯಂತರ ಅಥವಾ ಅಂತಿಮ ಆದೇಶ ಬರೋವರೆಗೆ ಕಾಂತಾರ ಸಿನಿಮಾದಲ್ಲಿ ‘ವರಾಹ ರೂಪಂ’ ಹಾಡನ್ನು ಬಳಕೆ ಮಾಡುವಂತಿಲ್ಲ. ಈ ಪ್ರಕರಣದ ಮರುವಿಚಾರಣೆಗೆ ಕೋರಲು ಅರ್ಜಿದಾರರಿಗೆ ಅವಕಾಶ ಇದೆ’ ಎಂದು ಬದ್ರುದೀನ್ ಹೇಳಿದ್ದಾರೆ. ತೈಕುಡಂ ಬ್ರಿಡ್ಜ್‌ನವರು ಕೋಯಿಕ್ಕೋಡ್‌ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ‘ವರಾಹ ರೂಪಂ’ ಹಾಡಿನಲ್ಲಿ ಬಳೆ ಆದ ಟ್ಯೂನ್ ‘ನವರಸಂ’ ಹಾಡಿನದ್ದು ಎನ್ನುವ ಆರೋಪ ಮಾಡಲಾಗಿತ್ತು. ಈ ಪ್ರಕರಣದ ಸದ್ಯ ಕೋರ್ಟ್‌ನಲ್ಲಿ ವಿಚಾರಣೆ ಆಗುತ್ತಿದೆ. ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪಗಳ ಕುರಿತು ತ್ವರಿತ ನಿರ್ಧಾರವನ್ನು ಪಡೆಯಲು ಅವರು ಸೂಕ್ತ ಸಿವಿಲ್ ನ್ಯಾಯಾಲಯಕ್ಕೆ ಹೋಗಬಹುದು ಎಂದು ನ್ಯಾಯಾಲಯದ ಆದೇಶವು ಸ್ಪಷ್ಟಪಡಿಸಿದೆ.