ಬೆಂಗಳೂರಿನಲ್ಲಿ ವ್ಯಕ್ತಿ ಒಬ್ಬ ಮೊದಲನೇ ಪತ್ನಿಗೆ ತಿಳಿಯದ ಹಾಗೆ ಕಣ್ತಪ್ಪಿಸಿ ಎರಡನೇ ವಿವಾಹವಾಗಿದ್ದ. ಮೊದಲ ಪತ್ನಿಗೆ ವಿಚ್ಛೇದನವನ್ನು ಕೂಡ ನೀಡಿರಲಿಲ್ಲ. ಎರಡನೇ ವಿವಾಹಕ್ಕೆ ಸಮ್ಮತಿಯನ್ನು ಪಡೆದಿರಲಿಲ್ಲ. ಎಲ್ಲವೂ ಸಲೀಸಾಗಿ ನಡೆಯುತ್ತಿದೆ ಎಂದುಕೊಂಡಿದ್ದ. ಆದರೆ ಎರಡನೇ ಪತ್ನಿಯ ಸೀಮಂತ ಕಾರ್ಯಕ್ರಮದ ಸುದ್ದಿಯಿಂದ ಸಿಕ್ಕಿಬಿದ್ದಿದ್ದಾನೆ. ಆತನ ಹೆಸರು ತೇಜಸ್. ಸೀಮಂತದ ಮನೆಯಲ್ಲಿ ಸದ್ದು ಜೋರಾಗಿಯೇ ಇತ್ತಂತೆ.
ತೇಜಸ್ ಅವರು ಮೊದಲು ವಿವಾಹವಾದದ್ದು 2018ರಲ್ಲಿ. ಮೊದಲ ಪತ್ನಿಯ ಹೆಸರು ಚೈತ್ರಾ. ಚೈತ್ರ ಅವರೊಡನೆ ಬಾಳುತ್ತಿರುವಾಗಲೇ ಮೇಘನಾ ಯಾದವ್ ಎಂಬುವರ ಜೊತೆ ಎರಡನೇ ವಿವಾಹವಾದನಂತೆ. ಓರ್ವ ಸಂಗಾತಿಯೊಂದಿಗೆ ಬಾಳುತ್ತಿರುವಾಗಲೇ, ವಿಚ್ಛೇದನವನ್ನು ನೀಡದೆ ಇನ್ನೊಬ್ಬರನ್ನು ವಿವಾಹವಾಗುವುದು ಕಾನೂನಿನ ಪ್ರಕಾರ ಅಪರಾಧ. ಮೊದಲನೇ ವಿವಾಹದ ಡಿವೋರ್ಸ್ ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿತ್ತಂತೆ. ಆದರೆ ಅದಾಗಲೇ ಎರಡನೇ ಪತ್ನಿ ಗರ್ಭಿಣಿ ಆಗಿದ್ದಳು.
ಫೆಬ್ರುವರಿ 9ರಂದು ಚಂದ್ರ ಲೇಔಟ್ ನಲ್ಲಿ ಪತ್ನಿಯು ಸೀಮಂತ ಕಾರ್ಯವನ್ನು ನಡೆಸುತ್ತಿದ್ದನಂತೆ. ಆ ವಿಷಯವನ್ನು ತಿಳಿದ ಚೈತ್ರಾ ಹಾಗೂ ಆಕೆಯ ಕುಟುಂಬಸ್ಥರು ಸೀಮಂತ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಅನ್ಯಾಯವನ್ನು ಪ್ರಶ್ನಿಸಿದ್ದಾರಂತೆ. ಅದೇ ವೇಳೆ ತೇಜಸ್, ಚೈತ್ರ ಹಾಗೂ ಆಕೆಯ ತಾಯಿಯ ಮೇಲೆ ಹಲ್ಲೆಯನ್ನು ಕೂಡ ಮಾಡಿದ್ದಾರಂತೆ. ಎರಡು ಕುಟುಂಬಸ್ಥರ ನಡುವೆ ಮಾರಾಮಾರಿಯೇ ನಡೆದಿದೆಯಂತೆ.
‘2018ರಲ್ಲಿ ತೇಜಸ್ ಚೈತ್ರಾಳನ್ನು ವಿವಾಹವಾಗಿದ್ದ. ಆತನಿಗೆ ಇನ್ನೊಬ್ಬರ ಜೊತೆ ಅಕ್ರಮ ಸಂಬಂಧವಿತ್ತು. ಆಕೆಯೊಟ್ಟಿಗಿನ ಸಂಬಂಧವನ್ನು ಚೈತ್ರಾ ಪ್ರಶ್ನಿಸಿದಾಗ ಹಲ್ಲೆಯನ್ನು ಮಾಡಿದ್ದ. ಇದೀಗ ಡಿವೋರ್ಸ್ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ, ಜೀವನಾಂಶವನ್ನು ಕೂಡ ನೀಡದೆ ಎರಡನೇ ವಿವಾಹವಾಗಿರುವುದು ಸಮಂಜಸವಲ್ಲ’ ಎಂದು ಚೈತ್ರನ ಕುಟುಂಬದವರು ಹೇಳಿದ್ದಕ್ಕಾಗಿ ತೇಜಸ್ ಹಲ್ಲೆ ನಡೆಸಿದ್ದಾನೆ.
ತೇಜಸ್ನ ಮೊದಲನೇ ಪತ್ನಿ ಚೈತ್ರಾ, ‘ತೇಜಸ್ ಆಸ್ತಿ ಇದೆ ಎಂದು ಗರ್ವ ತೋರಿಸುತ್ತಿದ್ದಾನೆ. ಆತನಿಂದ ನಾಲ್ಕರಿಂದ ಐದು ಜನ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಹಲ್ಲೆ ನಡೆಸಿದ್ದಕ್ಕಾಗಿ ನ್ಯಾಯವನ್ನು ಕೇಳಲು ಹೊರಟರೆ ಇಡೀ ಕುಟುಂಬದವರಿಗೆ ಜೀವ ಬೆದರಿಕೆ ಇಡುತ್ತಾನೆ. ಆತನದು ಎರಡನೇ ಮದುವೆ ಅಲ್ಲ. ಮೂರನೆಯದು’ ಎಂದು ಆರೋಪಿಸಿದ್ದಾರೆ. ಲೇಖನಾ ಎಂಬುವವರ ಸೀಮಂತ ಕಾರ್ಯಕ್ರಮದಲ್ಲಿ ಗಲಾಟೆ ನಡೆದಿದೆ ಎಂದು ಚೈತ್ರಾ ಸ್ಪಷ್ಟಪಡಿಸಿದ್ದಾರೆ.