ಉಡುಪಿ: ಮನೆಯೊಂದಕ್ಕೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಎಗರಿಸಿದ ಘಟನೆ ನಗರದ ಪುತ್ತೂರು ಬಳಿ ನಡೆದಿದೆ.
ಪುತ್ತೂರು ಗ್ರಾಮದ ಎಲ್‌ವಿಟಿ ದೇವಸ್ಥಾನದ ಬಳಿ ತನ್ನ ತಾಯಿಯೊಂದಿಗೆ ವಾಸವಿದ್ದ ಪೂಜಾ ಸಾಲ್ಯಾನ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಎದುರಿನ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು, ಬೆಡ್ ರೂಮಿನ ಗೊದ್ರೇಜ್ ನಲ್ಲಿದ್ದ 16 ಗ್ರಾಂ ತೂಕದ 1 ಚಿನ್ನದ ಬಳೆ, 4 ಗ್ರಾಂ ತೂಕದ 1 ಚಿನ್ನದ ಪೆಂಡೆಂಟ್ ಸೇರಿ ಒಟ್ಟು 20 ಗ್ರಾಂ ತೂಕದ ಸುಮಾರು 96,000 ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.