ಪಿಜಿ ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಟಾರ್ಚರ್ – ಸೆಕ್ಸ್ ಆಫರ್‌ ಕೊಟ್ಟು ಖೆಡ್ಡಾಕ್ಕೆ ಬೀಳಿಸಿದ ಖಾಕಿ

ಬೆಂಗಳೂರು: ಪಿಜಿಯಲ್ಲಿ ಆಶ್ರಯ ಪಡೆಯುವ ಯುವತಿಯರ ಸ್ನಾನ ಮಾಡುವ ದೃಶ್ಯಗಳನ್ನು ಬಾತ್‌ರೂಂನ ಕಿಟಕಿಯಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಸೆರೆಹಿಡಿದು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ವಿಕೃತ ಕಾಮಿಯನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಾಂಡಿಚೇರಿ ಮೂಲದ ನಿರಂಜನ್ ಬಂಧಿತ ಕಾಮುಕ.

ಯುವತಿಯ ಹೆಸರಿನಲ್ಲಿ ಪೊಲೀಸರೇ ಸೆಕ್ಸ್ ಆಫರ್ ಕೊಟ್ಟು ಸಿನಿಮೀಯ ರೀತಿಯಲ್ಲಿ ಇವನನ್ನು ಅರೆಸ್ಟ್ ಮಾಡಿದ್ದಾರೆ. ಹತ್ತನೇ ತರಗತಿ ಪಾಸು ಮಾಡಿಕೊಂಡಿದ್ದ ಈತ ಪಾಂಡಿಚೆರಿ ಮೂಲದವನು. ಕಳೆದ 4 ವರ್ಷಗಳಿಂದ ಬೊಮ್ಮನಹಳ್ಳಿಯ ಪಿಜಿಯಲ್ಲೇ ನೆಲೆಸಿದ್ದ ಆತ, ಆ ಪಿಜಿ ಮಾಲೀಕನೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡಿದ್ದ. ಆ ಪಿಜಿ ಕಟ್ಟಡಕ್ಕೆ ಹೊಂದಿಕೊಂಡೇ ಮಹಿಳೆಯರ ಪಿಜಿ ಇದ್ದು, ಎರಡು ಪಿಜಿಗಳಿಗೆ ಒಬ್ಬನೇ ಮಾಲೀಕ. ಹೀಗಾಗಿ ಮಹಿಳೆಯರ ಪಿಜಿಯಲ್ಲಿ ಏನಾದರೂ ಕೆಲಸಗಳಿದ್ರೆ, ತಾನೇ ಮುಂದೆ ನಿಂತು ಮಾಡಿಸುತ್ತಿದ್ದ. ಇದರಿಂದ ಲೇಡಿಸ್ ಪಿಜಿಯಲ್ಲಿ ಕೂಡಾ ನಿರಾತಂಕವಾಗಿ ಆರೋಪಿ ಓಡಾಡಲು ಮಾಲೀಕನೇ ಅವಕಾಶ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಂಡ ನಿರಂಜನ್ ಮಹಿಳೆಯರಿಲ್ಲದ ಹೊತ್ತಿನಲ್ಲಿ ಪಿಜಿಗೆ ತೆರಳಿ ಸ್ನಾನ ಗೃಹ, ಬೆಡ್ ರೂಂ ಹಾಗೂ ಇತರೆ ಸ್ಥಳಗಳನ್ನು ಪರಿಶೀಲಿಸಿದ್ದ. ಬಳಿಕ ಯುವತಿಯರು ಸ್ನಾನ ಮಾಡುವಾಗ ಎಲ್ಲಿಂದ ವಿಡಿಯೋ ರೆಕಾರ್ಡ್ ಮಾಡಿದ್ರೆ ಯಾರಿಗೂ ತಿಳಿಯುವುದಿಲ್ಲವೆಂದು ಸಂಚು ರೂಪಿಸಿ ತಾನು ವಾಸವಿದ್ದ ಪಿಜಿಯ ಟೆರೇಸ್ ಮೇಲಿಂದ ಪಕ್ಕದ ಲೇಡಿಸ್ ಪಿಜಿಯಲ್ಲಿದ್ದ ಯುವತಿಯರ ಚಲನವಲನದ ಮೇಲೆ ಕಣ್ಣಿಟ್ಟಿದ್ದ. ಆಗ ಯಾರಾದರೂ ಯುವತಿ ಸ್ನಾನ ಮಾಡಲು ಪಿಜಿಯ ಹೊರಗೆ ಒಣ ಹಾಕಿದ್ದ ಟವಲನ್ನು ತೆಗೆದುಕೊಂಡ ಕೂಡಲೇ ಆರೋಪಿ ಅಲರ್ಟ್‌ ಆಗಿ ಕೂಡಲೇ ತನ್ನ ಪಿಜಿಯ ಮಹಡಿಯಿಂದ ಲೇಡಿಸ್ ಪಿಜಿಯ ಮಹಡಿಗೆ ಜಿಗಿದು ನೀರಿನ ಪೈಪನ್ನು ಹಿಡಿದುಕೊಂಡು ಸ್ನಾನ ಗೃಹದ ಕಿಟಕಿಯ 1.5 ಅಡಿ ಎತ್ತರದ ಸಜ್ಜಾ ಮೇಲೆ ಕುಳಿತುಕೊಳ್ಳುತ್ತಿದ್ದ. ಅಲ್ಲಿಂದ ಮೊಬೈಲನ್ನು ತೂಗು ಬಿಟ್ಟು ಕಿಟಕಿ ಮೂಲಕ ಸ್ನಾನ ಮಾಡುತ್ತಿದ್ದ ಯುವತಿಯರ ನಗ್ನ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ಅಲ್ಲದೆ ಆಕೆಯ ಫೋಟೋ ಸಹ ತೆಗೆದು ಬಳಿಕ ಲೇಡಿಸ್ ಪಿಜಿ ರಿಜಿಸ್ಟರ್ ನಲ್ಲಿ ಆ ಯುವತಿಯರ ಮೊಬೈಲ್ ನಂಬರ್ ತೆಗೆದುಕೊಂಡು ಚಾಟಿಂಗ್ ಆರಂಭಿಸುತ್ತಿದ್ದ. ಬಹು ಕಿಲಾಡಿಯಂತೆ ಯೋಚಿಸುತ್ತಿದ್ದ ನಿರಂಜನ್ ತನ್ನ ಬಗ್ಗೆ ಯಾರಿಗೂ ತಿಳಿಯಬಾರದೆಂದು ತನ್ನ ಮೊಬೈಲ್‌ನಲ್ಲಿ ಓಇಘಿಖಿ PಐUS ಎಂಬ ಆ್ಯಪನ್ನು ಇನ್‌ಸ್ಟಾಲ್ ಮಾಡಿಕೊಂಡು ಆ್ಯಪ್‌ಗೆ ತನ್ನ ಇಮೇಲ್ ಐಡಿ ಮೂಲಕ ನೋಂದಾಯಿಸಿಕೊಂಡಿದ್ದ. ಆಗ ಸ್ಥಳೀಯ ಮೊಬೈಲ್ ಸಂಖ್ಯೆಯನ್ನು ವಿದೇಶಿ ಸಂಖ್ಯೆಯಾಗಿ ಪರಿವರ್ತಿಸಿ +1(747)222-8960 ಎಂಬ ನಂಬರನ್ನು ಪಡೆದು ಆ ನಂಬರ್‌ನಿಂದ ಯುವತಿಯರನ್ನು ಸಂಪರ್ಕಿಸುತ್ತಿದ್ದ. ತಾನು ಸೆರೆ ಹಿಡಿದ ನಗ್ನ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವುದಾಗಿ ಯುವತಿಯರಿಗೆ ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಬೆದರಿದ ಯುವತಿಯರನ್ನು ಲಾಡ್ಜ್ ಅಥವಾ ಇತರೆ ಸ್ಥಳಗಳಿಗೆ ಕರೆಸಿ ಲೈಂಗಿಕವಾಗಿ ಬಳಕೆ ಮಾಡಿಕೊಡಿರುವುದು ತನಿಖೆಯಿಂದ ದೃಢಪಟ್ಟಿದೆ. ಇತ್ತೀಚೆಗೆ ತಾನು ನೆಲೆಸಿದ್ದ ಪಿಜಿಯಲ್ಲಿ ಯುವತಿಯರು ಸ್ನಾನಕ್ಕೆ ಹೋದಾಗ ಅಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಮೊಬೈಲ್‌ಗೆ ಅನಾಮಧೇಯ ಸಂದೇಶ ಕಳುಹಿಸಿ ಲೈಂಗಿಕತೆಗೆ ಒತ್ತಾಯಿಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಇನ್‌ಸ್ಪೆಕ್ಟರ್ ಎಸ್.ಟಿ ಯೋಗೇಶ್ ನೇತೃತ್ವದ ತಂಡವು, ಯುವತಿ ಹೆಸರಿನಲ್ಲಿ ತಾವೇ ಯುವಕನಿಗೆ ಚಾಟಿಂಗ್ ಮಾಡಿದ್ದಾರೆ. ಬಳಿಕ ಸೆಕ್ಸ್ಗೆ ಒಪ್ಪಿಕೊಂಡಿರುವುದಾಗಿ ಆಫರ್ ಕೊಟ್ಟು ಕಾಮುಕನನ್ನ ಖೆಡ್ಡಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

Check Also

ಮುಸ್ಲಿಂ ರಾಷ್ಟ್ರವಾದ ತಜಿಕಿಸ್ತಾನದಲ್ಲಿ ಹಿಜಾಬ್ ಬ್ಯಾನ್​..!

ಭಾರತದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಕೆಲವು ರಾಜ್ಯಗಳು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿದಾಗ, ವಿಷಯವು …

Leave a Reply

Your email address will not be published. Required fields are marked *

You cannot copy content of this page.