ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆಯ (KTET Exam 2022) ಪ್ರವೇಶ ಪತ್ರದಲ್ಲಿ ಮಹಿಳಾ ಅಭ್ಯರ್ಥಿಯ ಫೋಟೊಗೆ ಬದಲಾಗಿ ಮಾಜಿ ಪೋರ್ನ್‌ಸ್ಟಾರ್ ನಟಿ ಸನ್ನಿ ಲಿಯೋನ್ ಫೋಟೋ ಇರೋದು ಪತ್ತೆಯಾಗಿದೆ. ಈ ನಡುವೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮಹಿಳಾ ಅಭ್ಯರ್ಥಿಯೊಬ್ಬರು ಅರ್ಜಿ ಸಲ್ಲಿಸಿದ್ದರು, ಅವರ ಫೋಟೋ ಬದಲಿಗೆ ಸನ್ನಿಲಿಯೋ ಫೋಟೋ ಇರೋದು ಕಂಡು ಬಂದಿದೆ. ಶಿವಮೊಗ್ಗದಲ್ಲಿ ಮಹಿಳಾ ಅಭ್ಯರ್ಥಿಯ ಪರೀಕ್ಷಾ ಕೇಂದ್ರ ಇದ್ದುದ್ದರಿಂದ ಅಲ್ಲಿಯೇ ದೂರು ದಾಖಲಿಸಲಾಗಿದೆ ಎನ್ನಲಾಗಿದೆ. ಇದಲ್ಲದೇ ತಾವು ತಮ್ಮ ಫೋಟೋವನ್ನು ಹಾಕಿ, ಅದರ ಪ್ರಿಂಟ್ ಔಟ್ ತೆಗೆದಿದ್ದರು ಕೂಡ ಸನ್ನಿಲಿಯೋ ಫೋಟೋ ಹೇಗೆ ಬರಲು ಸಾಧ್ಯವಾಯ್ತು ಅನ್ನೋದು ಈಗ ಪ್ರಶ್ನೆಯಾಗಿದ್ದು, ಇಲಾಖೆಯ ಗೌಪತ್ಯೆ ಬಗ್ಗೆ ಅನುಮಾನ ಮೂಡಿಸಿದೆ.