TET ಪರೀಕ್ಷೆಗೆ ಕರ್ನಾಟಕಕ್ಕೆ ಬಂದಿದ್ದ ‘ ಪೋರ್ನ್‌ ಸ್ಟಾರ್‌ ಸನ್ನಿಲಿಯೋನ್‌’ : ಆಗಿದ್ದೇನು ಗೊತ್ತಾ?

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆಯ (KTET Exam 2022) ಪ್ರವೇಶ ಪತ್ರದಲ್ಲಿ ಮಹಿಳಾ ಅಭ್ಯರ್ಥಿಯ ಫೋಟೊಗೆ ಬದಲಾಗಿ ಮಾಜಿ ಪೋರ್ನ್‌ಸ್ಟಾರ್‌ ನಟಿ ಸನ್ನಿ ಲಿಯೋನ್‌ ಫೋಟೋ ಇರೋದು ಪತ್ತೆಯಾಗಿದೆ. ಈ ನಡುವೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮಹಿಳಾ ಅಭ್ಯರ್ಥಿಯೊಬ್ಬರು ಅರ್ಜಿ ಸಲ್ಲಿಸಿದ್ದರು, ಅವರ ಫೋಟೋ ಬದಲಿಗೆ ಸನ್ನಿಲಿಯೋ ಫೋಟೋ ಇರೋದು ಕಂಡು ಬಂದಿದೆ. ಶಿವಮೊಗ್ಗದಲ್ಲಿ ಮಹಿಳಾ ಅಭ್ಯರ್ಥಿಯ ಪರೀಕ್ಷಾ ಕೇಂದ್ರ ಇದ್ದುದ್ದರಿಂದ ಅಲ್ಲಿಯೇ ದೂರು ದಾಖಲಿಸಲಾಗಿದೆ ಎನ್ನಲಾಗಿದೆ. ಇದಲ್ಲದೇ ತಾವು ತಮ್ಮ ಫೋಟೋವನ್ನು ಹಾಕಿ, ಅದರ ಪ್ರಿಂಟ್‌ ಔಟ್‌ ತೆಗೆದಿದ್ದರು ಕೂಡ ಸನ್ನಿಲಿಯೋ ಫೋಟೋ ಹೇಗೆ ಬರಲು ಸಾಧ್ಯವಾಯ್ತು ಅನ್ನೋದು ಈಗ ಪ್ರಶ್ನೆಯಾಗಿದ್ದು, ಇಲಾಖೆಯ ಗೌಪತ್ಯೆ ಬಗ್ಗೆ ಅನುಮಾನ ಮೂಡಿಸಿದೆ.

Check Also

ಬಿಜೆಪಿಯ ಉಚ್ಚಾಟನೆಗೆ ನಾನು ತಲೆಬಿಸಿ ಮಾಡಿಕೊಳ್ಳಲ್ಲ : ರಘುಪತಿ ಭಟ್

ಉಡುಪಿ: ಬಿಜೆಪಿಯಿಂದ ನನ್ನನ್ನು ಉಚ್ಛಾಟನೆ ಮಾಡಿರುವುದು ಮಾಧ್ಯಮದ ಮೂಲಕ ತಿಳಿದು ಬೇಸರವಾಯಿತು. ಶಿಸ್ತು ಸಮಿತಿಯಿಂದ ನನಗೆ ಈವರೆಗೆ ಯಾವುದೇ ನೋಟಿಸ್ …

Leave a Reply

Your email address will not be published. Required fields are marked *

You cannot copy content of this page.