ಉಡುಪಿ: ಸ್ಕೂಟರ್ ನಲ್ಲಿ ಅಂಗನವಾಡಿ ಕಾರ್ಯಕರ್ತೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಯುವಕರಿಬ್ಬರು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿದ ಘಟನೆ ನಡೆದಿದೆ. ಪಡುಬಿದ್ರಿಯ ಇನ್ನಾ ಗ್ರಾಮದ ಹೊಸಕಾಡು ಎಂಬಲ್ಲಿ ನಡೆದಿದೆ.
ಹೊಸಕಾಡು ನಿವಾಸಿ ರೇಖಾ (40) ಅವರ 39 ಗ್ರಾಂ ಕರಿಮಣಿ ಸರವನ್ನು, ವಿಳಾಸ ಕೇಳುವ ನೆಪದಲ್ಲಿ, ಅಪರಿಚಿತ ಯುವಕರಿಬ್ಬರು ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
ಹೆಲ್ಮೆಟ್ ಧರಿಸಿದ್ದ ಮೋಟಾರು ಬೈಕ್ ಸವಾರ ಪೂರ್ವ ಸನ್ನದ್ದನಾಗಿ ಬೈಕ್ ನಲ್ಲಿ ಕುಳಿತಿದ್ದ. ಹಿಂಬದಿ ಸವಾರ ರೇಖಾ ಅವರ ಬಳಿ ನಿಲ್ಲಿಸಿ ಚೀಟಿ ತೋರಿಸಿ ವಿಳಾಸ ಕೇಳುವ ನೆಪದಲ್ಲಿ ಬಂದು ಕೃತ್ಯವೆಸಗಿದ್ದಾನೆ