ಉಡುಪಿ: ರೈಲಿನಲ್ಲಿ ಇಳಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೇ ಸಿಬಂದಿ ರಕ್ಷಿಸಿರುವ ಘಟನೆ ನಡೆದಿದೆ. ಅಭಿಮನ್ಯು ಎಂಬವರು ಮುಂಬೈಯಿಂದ ಮಂಗಳೂರಿಗೆ ತೆರಳಲು ಟಿಕೆಟ್ ಮಾಡಿದ್ದರು. ಆದರೆ ಅಚಾತುರ್ಯದಿಂದ ಅವರು ಪಟ್ನಾ ವಾಸ್ಕೋ ರೈಲನ್ನು ಹತ್ತಿದ್ದರು.
ಈ ಬಗ್ಗೆ ಕೂಡಲೇ ಅರಿವಿಗೆ ಬಂದ ಕಾರಣ ಅವರು ರೈಲು ಹೊರಡಲು ವೇಳೆ ಇಳಿಯಲು ಯತ್ನಿಸಿದರು. ಇದರ ಪರಿಣಾಮ ಅವರು ಆಯತಪ್ಪಿ ಬಿದ್ದರೆನ್ನಲಾಗಿದೆ. ಕೂಡಲೇ ಅದೇ ಪ್ಲಾಟ್‌ಫಾರ್ಮ್‌ನಲ್ಲಿದ್ದ ಮಡಗಾಂವ್ ಮಂಗಳೂರು ರೈಲಿನ ಟಿಟಿಇ ಉದಯ್ ಎಂ.ನಾಯ್ಕ ಆತನನ್ನು ರಕ್ಷಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದರು ಎಂದು ಕೊಂಕಣ ರೈಲ್ವೇಯ ಪಿಆರ್ ಓ ಕೆ.ಸುಧಾಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.