ಬಳ್ಳಾರಿ: ಅನ್ಯ ಜಾತಿಯ ಯುವಕನ ಪ್ರೀತಿಸಿದ ಮಗಳನ್ನು ಸಿನಿಮಾ ತೋರಿಸುವ ನೆಪದಲ್ಲಿ ಕರೆದುಕೊಂಡ ಹೋಗಿ ಅಪ್ಪ ಕೊಲೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಜಿಲ್ಲೆಯ ಕುಡುತಿನಿ ಪಟ್ಟಣದ ಸಿದ್ದಮ್ಮನಹಳ್ಳಿ ಬಳಿ ತುಂಗಭದ್ರ ಹೆಚ್‌ಎಲ್‌ಸಿ ಕಾಲುವೆಯಲ್ಲಿ ಈ ಘಟನೆ ನಡೆದಿದೆ.
ಕೊಲೆ ಆರೋಪಿಯನ್ನು ಓಂಕಾರಗೌಡ ಎನ್ನಲಾಗಿದ್ದು, ಈತನ ಪುತ್ರಿ ಬೇರೆ ಜಾತಿಯ ಯುವಕನನ್ನು ಪ್ರೀತಿಸಿದನ್ನು ಸಹಿಸದೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಅ. 31ರಂದು ಮಗಳನ್ನು ಸಿನಿಮಾ ತೋರಿಸುವುದಾಗಿ ಕರೆದುಕೊಂಢ ಹೋದ ಓಂಕಾರಗೌಡ ಸಿನಿಮಾ ತೋರಿಸಿ ಹೋಟೆಲ್ಗೆ ಕರೆದೊಯ್ದು ತಿಂಡಿ ತಿನ್ನಿಸಿ, ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿ ಬಳಿಕ ಅಂದು ರಾತ್ರಿ ಆಕೆಯನ್ನು ಹೆಚ್‌ಎಲ್‌ಸಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿ ತಿರುಪತಿಗೆ ಹೋಗಿ ದೇವರಿಗೆ ಕೈ ಮುಗಿದು ಉರಿಗೆ ಬಂದಿದ್ದಾನೆ. ಇದೇ ವೇಳೆ ಆತನನ್ನು ಪೋಲಿಸರು ಬಂಧಿಸಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.