

ವಿಟ್ಲ: ಕ್ಷುಲ್ಲಕ ಕಾರಣಕ್ಕೆ ರಸ್ತೆಬದಿಯಲ್ಲಿ ಫೋನ್‌ನಲ್ಲಿ ಮಾತಾನಾಡುತ್ತಿದ್ದ ಯುವಕನ ಮೇಲೆ ಹಲ್ಲೆಗೈದ ಘಟನೆ ವಿಟ್ಲದ ಕಂಬಳಬೆಟ್ಟು ದರ್ಗಾದ ಬಳಿ ನಡೆದಿದೆ. ಮಹಮ್ಮದ್ ಅನ್ವರ್ ಎಂಬ ಯುವಕ ಕಂಬಳಬೆಟ್ಟು ದರ್ಗಾದ ಬಳಿ ಫೋನ್ ನಲ್ಲಿ ಮಾತನಾಡುವಾಗ ಸಿನಾನ್, ರಾಬಿ, ಸಿಯಾನ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ರಾತ್ರಿ 10.30 ಗಂಟೆಗೆ ಕಂಬಳಬೆಟ್ಟು ದರ್ಗಾದ ಬಳಿ ಅನ್ವರ್ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಮೂರು ದ್ವಿ ಚಕ್ರ ವಾಹನದಲ್ಲಿ ಬಂದ ಸಿನಾನ್ ಯಾನೆ ಚಿನ್ನು , ರಾಬಿ ಹಾಗೂ ಶಿಯಾಬ್ ಯಾನೆ ಮೂಚಿ, ಬಂದು ಫೋನ್‌ನಲ್ಲಿ ಮಾತನಾಡುತ್ತಿದ್ದ ಬಗ್ಗೆ ಕಮೆಂಟ್ ಮಾಡಿದ್ದಾರೆ. ನನಗೆ ನಿಮಗೆ ಗುರುತು ಪರಿಚಯವಿಲ್ಲ ಎಂದು ಹೇಳಿದಾಗ ಆ ಮೂವರು ಪುಂಡರು ರಂಡೆ ಮೋನೆ, ನಂಗ ಎಂದ್ರೆ ಬೇನೆಂಗ್ ಆಕ್‌ಡಾ ನೀನಾರ್ʼʼ ಎಂದು ಹೇಳಿ ಮೂವರ ಪೈಕಿ ಸಿನಾನ್ ಅಲ್ಲೇ ಇದ್ದ ಕಬ್ಬಿಣದ ರಾಡ್‌ನಿಂದ ಕುತ್ತಿಗೆಯ ಹಿಂಭಾಗ ಹಾಗೂ ಎರಡೂ ಕೈಗಳ ಮೊಣ ಕೈಗಳ ಭಾಗಕ್ಕೆ ಹೊಡೆದಿದ್ದು, ರಾಬಿ ಕಲ್ಲಿನಿಂದ ಹಿಂಬದಿಯ ಸೊಂಟಕ್ಕೆ ಮತ್ತು ಬೆನ್ನಿಗೆ ಗುದ್ದಿರುತ್ತಾನೆ ಹಾಗೂ ಶಿಯಾಬ್ ಯಾನೆ ಮೂಚಿ ಹಲ್ಲೆ ಮಾಡಿದ್ದಾನೆ. ಸ್ಥಳೀಯರು ಅಲ್ಲಿಗೆ ಬರುತ್ತಿದ್ದಂತೆ ಆ ಮೂವರು ʼʼನಿಂಡೆ ಕೊಲ್ಲಂಡೆ ಬುಡ್ಲೆ ʼʼ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಘಟನೆ ಬಳಿಕ ಅನ್ವರ್ ವಿಟ್ಲ ಸರಕಾರಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆಯನ್ನು ಪಡೆದು, ಮರುದಿನ ಎದೆನೋವು ಕಾಣಿಸಿಕೊಂಡಿದ್ದು ಪುತ್ತೂರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ..