ಉಳ್ಳಾಲ: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ – ಮಹಿಳೆಯ ಬಂಧನ, ಯುವತಿಯರ ರಕ್ಷಣೆ

ಉಳ್ಳಾಲ: ಉಳ್ಳಾಲ ತಾಲೂಕಿನ ಪಂಡಿತ್ ಹೌಸ್ ಸಮೀಪದ ವಿಜೇತ ನಗರದಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಪೊಲೀಸರ ತಂಡ ಮಾ. 07 ರ ರಾತ್ರಿ ದಾಳಿ ನಡೆಸಿ ಕಿಂಗ್ ಪಿನ್ ಮಹಿಳೆಯನ್ನ ಬಂಧಿಸಿದ್ದು ,ಮತ್ತೋರ್ವ ಪಿಂಪ್ ತಲೆ ಮರೆಸಿಕೊಂಡಿದ್ದಾನೆ.ಬಂಟ್ವಾಳ ತಾಲೂಕಿನ ಬೊಳಂತೂರು ಗ್ರಾಮದ ,ವಿಟ್ಲಕೋಡಿ ನಿವಾಸಿ, ಪಿಂಪ್ ರುಕಿಯಾ (50)ಬಂಧಿತ ಆರೋಪಿ. ಮತ್ತೋರ್ವ ಪ್ರಮುಖ ಆರೋಪಿ ಪಿಂಪ್ ಲತೀಫ್ ಎಂಬಾತ ಪರಾರಿಯಾಗಿದ್ದಾನೆ. ರುಕಿಯಾ ವಿಜೇತ ನಗರದ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನಿಟ್ಟು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ಎನ್. ನಾಯ್ಕ್ ಅವರು ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಸಂದೀಪ್ ಜಿ.ಎಸ್. ಉಪ‌ನಿರೀಕ್ಷಕರಾದ ಮಂಜುಳಾ.ಎಲ್ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಅಡ್ಡೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮೂವರು ಗಿರಾಕಿಗಳನ್ನ ವಶಕ್ಕೆ ಪಡೆದ ಪೊಲೀಸರು ನಾಲ್ವರು ನೊಂದ ಯುವತಿಯರನ್ನ ರಕ್ಷಿಸಿದ್ದಾರೆ.ಬಂಧಿತ ಆರೋಪಿಯಿಂದ 3 ದ್ವಿಚಕ್ರ ವಾಹನಗಳು, 9 ಮೊಬೈಲ್ ಫೋನ್ ಗಳು, 5,000 ನಗದು ಸೇರಿದಂತೆ ಒಟ್ಟು 1,76,580 ರೂಪಾಯಿ ಮೌಲ್ಯದ ಸೊತ್ತನ್ನ ವಶ ಪಡಿಸಲಾಗಿದೆ.ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ್ ಎನ್, ದಾಕ್ಷಾಯಿಣಿ,ಲಕ್ಷ್ಮಿ, ಎಸಿಪಿ ರೌಡಿ ನಿಗ್ರಹದಳ ಸಿಬ್ಬಂದಿ ರೆಜಿ ಪಾಲ್ಗೊಂಡಿದ್ದರು.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.