ಕಾಸರಗೋಡು : ಕಾಸರಗೋಡು ಮೂಲದ ಅಂಜುಶ್ರೀ ಪಾರ್ವತಿ ಅವರ ಸಾವು ವಿಷಾಹಾರ ಸೇವನೆಯಿಂದ ಸಂಭವಿಸಿಲ್ಲ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಗಳು ತಿಳಿಸಿವೆ.
ಚೆಮ್ನಾಡಿನ ಠಕ್ಕಕ್ಲಾಯಿ ಗ್ರಾಮದ ನಿವಾಸಿ ಅಂಜುಶ್ರೀ ಅವರು ಡಿಸೆಂಬರ್ 31ರಂದು ಪಟ್ಟಣದ ಅಡ್ಕತ್‌ಬೈಲ್‌ನಲ್ಲಿರುವ ಅಲ್ ರೊಮ್ಯಾನ್ಶಿಯಾ ರೆಸ್ಟೋರೆಂಟ್‌ನಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದರು. ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದರು, ಪುಡ್ ಪಾಯಿಸನ್ ನಿಂದಾಗಿ ಅಂಜುಶ್ರೀ ಅವರ ಸಾವು ಸಂಭವಿಸಿದೆ ಎಂದು ಪೊಲೀಸರು ರೆಸ್ಟೋರೆಂಟ್ ನ ಮಾಲೀಕ ಸೇರಿದಂತೆ ಮೂವರನ್ನುಅರೆಸ್ಟ್ ಮಾಡಿದ್ದರು,
ಇದೀಗ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು. ಅದರಲ್ಲಿ ಅಂಜುಶ್ರೀ ಅವರ ಕರಳು ನಿಷ್ಕ್ರೀಯವಾಗಿದ್ದು, ಜಾಂಡಿಸ್ ಕೂಡ ಇತ್ತು ಎಂದು ಹೇಳಲಾಗಿದೆ. ಯಕೃತ್ತಿನ ಒಂದು ಭಾಗವು ಹಾನಿಗೊಳಗಾಗಿದೆ, ಆದರೆ ದೇಹದಲ್ಲಿ ವಿಷವೊಂದು ಪತ್ತೆಯಾಗಿದ್ದು ಅದು ಕರುಳನ್ನು ಹಾನಿಗೊಳಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ,. ಆದರೆ ಅದು ಆಹಾರದಲ್ಲಿನ ವಿಷವಲ್ಲ ಎಂದು ಫಾರೆನ್ಸಿಕ್ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮತ್ತಷ್ಟು ತನಿಖೆ ಮಾಡಬೇಕಾಗಿದೆ. ನಾವು ಒಳಾಂಗಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದೇವೆ” ಎಂದು ವೈಭವ್ ಸಕ್ಸೇನಾ ಹೇಳಿದರು.