ಸ್ವಾತಂತ್ರ್ಯಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭದ ಪೂರ್ವಭಾವಿ ಸಭೆ ಬಿ.ಸಿ.ರೋಡು ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ರವಿವಾರ ದಿನಾಂಕ 8ರಂದು ಪೂವಾಹ್ನ 10.30ಕ್ಕೆ ಸರಿಯಾಗಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ವಾತಂತ್ರ್ಯಯೋಧ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ, ಬಂಟ್ವಾಳ ಇದರ ಅಧ್ಯಕ್ಷರೂ ಹಿರಿಯ ಪತ್ರಕರ್ತರೂ ಆದ ಅಮ್ಮೆಂಬಳ ಆನಂದ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭದ ರೂಪುರೇಷೆಗಳನ್ನು ವಿವರಿಸಿದರು.
ಸಭೆಯಲ್ಲಿ ಡಾ. ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭಕ್ಕೆ ಅತಿಥಿ ಗಣ್ಯರನ್ನು ಆಹ್ವಾನಿಸುವುದು, ದೇಶಭಕ್ತಿಗೀತೆ ಸ್ಪರ್ಧೆ ಆಯೋಜನೆ, ಅಮ್ಮೆಂಬಳ ಬಾಳಪ್ಪರ ಸಂಸ್ಮರಣಾರ್ಥ ಸಂಚಿಕೆ ಬಿಡುಗಡೆ, ಸಾಧಕರಿಗೆ ಸನ್ಮಾನ ಮುಂತಾದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಯಿತು. ಶತಾಬ್ದಿ ಸಮಾರಂಭವನ್ನು ಸಂಪೂರ್ಣ ಯಶಸ್ವಿ ಗೊಳಿಸುವುದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭ ಸಮಿತಿಗೆ ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಅವರನ್ನು ಗೌರವಾಧ್ಯಕ್ಷರನ್ನಾಗಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ. ತುಕಾರಾಮ ಪೂಜಾರಿ ಅವರನ್ನು ಅಧ್ಯಕ್ಷರನ್ನಾಗಿ, ಪುಂಡರೀಕಾಕ್ಷ ಯು. ಕೈರಂಗಳ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ, ಉಮೇಶ್ ಪಿ.ಕೆ. ನಾಗಲಚ್ಚಿಲು ಅವರನ್ನು ಕೋಶಾಧಿಕಾರಿಯನ್ನಾಗಿ, ಮಂಜು ವಿಟ್ಲ ಅವರನ್ನು ಪ್ರಧಾನ ಸಂಯೋಜಕರನ್ನಾಗಿ ಹಾಗೂ ಡಾ.ಆಶಾಲತಾ ಸುವರ್ಣ, ಡಾ.ರಶ್ಮಿ ಅಮ್ಮೆಂಬಳ, ರತ್ನಾವತಿ, ಪ್ರಸಾದ್ ಕುಮಾರ್ ಮಾರ್ನಬೈಲು, ಡಾ. ದುಗ್ಗಪ್ಪ ಕಜೆಕಾರು ಅವರನ್ನು ಸಂಪಾದಕ ಮಂಡಳಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಿವೃತ್ತ ಯೋಧ ಡಿ. ಚಂದಪ್ಪ ಮೂಲ್ಯ, ಭೋಜ ಅಡ್ಯಾರ್, ಮಯೂರ್ ಉಳ್ಳಾಲ್, ರವೀಂದ್ರನಾಥ, ತೇಜಸ್ವಿರಾಜ್, ಶ್ರೀರಾಮ ದಿವಾಣ, ಪಾಂಡುರಂಗ ನಾಯಕ್, ಸದಾನಂದ ಬಂಗೇರ ಮುಡಿಪು, ಸುರೇಶ್ ಬಂಗೇರ, ದಾಮೋದರ ಸಾಲ್ಯಾನ್ ಸಂಚಯಗಿರಿ, ಜನಾರ್ದನ ಕುಲಾಲ್, ಕಿರಣ್ ಅಟ್ಲೂರು, ಸದಾಶಿವ ಕುಲಾಲ್, ಸಿ. ಮುತ್ತಪ್ಪ ಪೂಜಾರಿ, ಕೇಶವ ಮಾಸ್ಟರ್ ಮಾರ್ನಬೈಲು, ಪ್ರದೀಪ್ ಅತ್ತಾವರ್, ಎ. ಶಿವಪ್ಪ ಬಿ.ಸಿ.ರೋಡು ಮೊದಲಾದವರು ಉಪಸ್ಥಿತರಿದ್ದರು. ಉಮೇಶ್ ಪಿ. ಕೆ. ಸ್ವಾಗತಿಸಿದರು ಮತ್ತು ದಾಮೋದರ್ ಬಿ. ಎಂ. ವಂದಿಸಿದರು.