ಮಂಗಳೂರು: ಪ್ರತಿಷ್ಟಿತ ಕಾಲೇಜಿನಲ್ಲಿ ಬುರ್ಖಾ ಹಾಕಿಕೊಂಡು ಅಸಭ್ಯವಾಗಿ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಮಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ವಿಡಿಯೋ ಇದು ಎನ್ನಲಾಗಿದ್ದು, ವಿಡಿಯೋ ವೈರಲ್ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಎಚ್ಚೆತ್ತುಕೊಂಡು ನಾಲ್ವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ.
ವಿಡಿಯೋ ಬಗ್ಗೆ ಕಾಲೇಜು ಪ್ರಾಂಶುಪಾಲರು ಪ್ರತಿಕ್ರಿಯಿಸಿದ್ದು, ವಿಡಿಯೋ ವೈರಲ್ ಬಳಿಕ ನಮಗೆ ಈ ವಿಚಾರ ಅರಿವಿಗೆ ಬಂದಿದೆ.ಕಾಲೇಜಿನ ವಿಭಾಗವೊಂದರಲ್ಲಿ ಸಂಘದ ಉದ್ಘಾಟಣೆ ಬಳಿಕ ಈ ಡ್ಯಾನ್ಸ್ ಮಾಡಲಾಗಿದೆ.ಇದಕ್ಕೆ ಯಾವುದೇ ಅನುಮತಿ ನಾವು ಕೊಟ್ಟಿಲ್ಲ, ಡ್ಯಾನ್ಸ್ ಮಾಡಿದ ವಿದ್ಯಾರ್ಥಿಗಳು ಅದೇ ಸಮುದಾಯಕ್ಕೆ ಸೇರಿದವರು. ಅವರನ್ನು ಅಮಾನತು ಮಾಡಿ ಹೆಚ್ಚಿನ ವಿಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಯಾವುದೇ ಧರ್ಮ ಅಥವಾ ಭಾವನೆಗಳಿಗೆ ಧಕ್ಕೆ ತರುವ ನಡೆತೆಗೆ ನಮ್ಮ ಬೆಂಬಲವಿಲ್ಲ, ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಸ್ಪಷ್ಟಣೆಯನ್ನು ನೀಡಿದೆ.