ಶಿವಮೊಗ್ಗ : ಶಿವಮೊಗ್ಗದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಸ್ಟೆಬಿಲೈಜರ್ ಸ್ಪೋಟಗೊಂಡು ತಂದೆ ಸಾವನ್ನಪ್ಪಿದ್ದು, ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಚೇರಿ ಎದುರಿನ ಮನೆಯಲ್ಲಿ ಸ್ಟೆಬಿಲೈಜರ್ ಸ್ಪೋಟಗೊಂಡ ಪರಿಣಾಮ ಪ್ರತಿಷ್ಠಿತ ಭೂಪಾಳಂ ಕುಟುಂಬದ ಶರತ್ (39) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶರತ್ ಪುತ್ರ ಸಂಚಿತ್ (12) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.