ಕನ್ಯಾನ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ ಫೆ. 6 ರಿಂದ 16 ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ,ಆಶೀರ್ವಚನ ನೀಡಿ ಧರ್ಮದ ಚೌಕಟ್ಟಿನಲ್ಲಿ ಬದುಕಿನ ಔನ್ನತ್ಯ ನಿಂತಿದೆ. ಬ್ರಹ್ಮಕಲಶದಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುವುದು ಬದುಕಿನಲ್ಲಿ ಸಿಗುವ ಅಪರೂಪದ ಅವಕಾಶ. ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಎಂಬಂತೆ ಸೇವೆ ನೀಡಬೇಕಾಗಿದೆ ಎಂದರು.
ಮಾಣಿಲ ಶ್ರೀ ಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಕ್ಲಪ್ತ ಸಮಯಕ್ಕೆ ಸುಸೂತ್ರವಾಗಿ ಕಾರ್ಯಕ್ರಮ ನಡೆಯಬೇಕು. ಊರಿನ ದೇಗುಲದ ಬ್ರಹ್ಮಕಲಶೋತ್ಸವದ ಸಂಭ್ರಮವನ್ನು ಅನುಭವಿಸಬೇಕು.
ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಏಕ ಮನಸ್ಸಿನಿಂದ ಒಟ್ಟಾಗಿ ದೇವರ ಕೈಂಕರ್ಯಕ್ಕೆ ಕಟಿಬದ್ಧರಾಗಬೇಕು ಎಂದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಿ.ರಾಮ ದೇಲಂತಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಿ.ಚಂದಪ್ಪ ಮೂಲ್ಯ, ಪ್ರಧಾನ ಕಾರ್ಯದರ್ಶಿ ಎಂ.ಬಾಲಕೃಷ್ಣ ರಾವ್ , ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನೋಜ್ ಕುಮಾರ್ ಬನಾರಿ,
ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಕೆ.ಆರ್.ಕುಮಾರ್ ಕಣಿಯೂರು, ಕೋಶಾಧಿಕಾರಿ ಗೋಪಾಲಕೃಷ್ಣ ಶರ್ಮ, ಅರ್ಚಕ ಮಹಾಬಲೇಶ್ವರ ಭಟ್ ದೇಲಂತಬೆಟ್ಟು, ಪವಿತ್ರಪಾಣಿ ಸುಬ್ಬರಾಂ ಪಿಲಿಂಗುಳಿ, ಬನಾರಿ ಗೋಪಾಲಕೃಷ್ಣ ದೇವಸ್ಥಾನ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಡಿ.ನಾರಾಯಣ ಭಟ್ ದೇಲಂತಬೆಟ್ಟು, ಸ್ವಾಗತ ಸಮಿತಿ ಸಂಚಾಲಕ ಎಸ್.ಬಿ.ಕಣಿಯೂರು, ಕೃಷ್ಣ ಬನಾರಿ, ಮಾಹಿತಿ ಕೇಂದ್ರದ ಸಂಚಾಲಕ ಗಣೇಶ್ ಕುಲಾಲ್, ಶ್ರೀ ವಿಷ್ಣುಮೂರ್ತಿ ಮಾತೃ ಮಂಡಳಿ ಅಧ್ಯಕ್ಷೆ ಹೇಮಾ ಆರ್.ದೇಲಂತಬೆಟ್ಟು, ಕಾರ್ಯದರ್ಶಿ ವಸಂತಿ ಅಂಗ್ರಿ ಉಪಸ್ಥಿತರಿದ್ದರು.