March 5, 2026
WhatsApp Image 2023-10-06 at 1.36.24 PM

 ಶಿವಮೊಗ್ಗದ ರಾಗಿ ಗುಡ್ಡದಲ್ಲಿ ಇತ್ತೀಚಿಗೆ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದಂತಹ ಮನೆಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಮಾತನಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲು ತೂರಾಟ ಕತ್ತಿ ತಗೊಂಡು ಹೊಡೆಯುವುದು ಸಣ್ಣ ವಿಚಾರನಾ?

ಶಿವಮೊಗ್ಗದ ಘಟನೆ ಯಾರು ಸಣ್ಣ ವಿಚಾರವೆಂದು ಭಾವಿಸಬಾರದು. ಇಂತಹ ಗಲಭೆಗಳನ್ನು ಸರ್ಕಾರ ಮೂಲದಲ್ಲಿಯೇ ಹತ್ತಿಕ್ಕಬೇಕು ಎಂದು ತಿಳಿಸಿದ್ದಾರೆ. ಧರ್ಮ ಎಂದರೆ ಸಮಾಜವನ್ನು ನಿರಂತರ ಮುನ್ನಡೆಸುವ ಬದುಕಿನ ಸೂತ್ರವಾಗಿದೆ. ಎಲ್ಲರೂ ಸುಖ ಸಂತೋಷದಿಂದ ಇರಬೇಕು. ಅದಕ್ಕಾಗಿ ಅಳವಡಿಸಿಕೊಳ್ಳಬೇಕಾದ ನೀತಿ ನಿಯಮವೇ ಸನಾತನ ಧರ್ಮವಾಗಿದೆ. ನಮ್ಮ ಸಂತೋಷದ ಪ್ರಯತ್ನ ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಾರದು ಆಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು. ಒಮ್ಮೆ ಕಿಡಿ ಹೊತ್ತಿದರೆ ಅಷ್ಟು ಬೇಗ ಶಾಂತಿ ಮತ್ತೆ ನೆಲೆಸುವುದಿಲ್ಲ. ಮಣಿಪುರವೇ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಧಾರವಾಡದಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

About The Author

Leave a Reply

Your email address will not be published. Required fields are marked *

You cannot copy content of this page.