2,000 ರೂ. ಮುಖಬೆಲೆ ನೋಟು ವಿನಿಮಯಕ್ಕೆ ನಾಳೆ ಕೊನೆ ದಿನ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದಲ್ಲಿ ಚಾಲ್ತಿಯಲ್ಲಿದ್ದ 2 ಸಾವಿರ ರೂ ಮುಖಬೆಲೆಯ ನೋಟುಗಳ ವಿನಿಮಯ ಮತ್ತು ಠೇವಣಿ ಇರಿಸಲು ನೀಡಿರುವ ಗಡುವು ನಾಳೆಗೆ (ಅ. 7) ಮುಕ್ತಾಯವಾಗಲಿದೆ.

ಈ ಹಿನ್ನೆಲೆಯಲ್ಲಿ ಜನರು ಇನ್ನು ಎರಡು ದಿನದೊಳಗೆ ತಮ್ಮಲ್ಲಿರುವ 2000ರೂ. ನೋಟುಗಳನ್ನು ಬದಲಿಸಿಕೊಳ್ಳದಿದ್ದರೆ ಆ ಬಳಿಕ ಅವುಗಳನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.

ಮೇ 19ರಂದು ಈ ಬಗ್ಗೆ ಆರ್‌ಬಿಐ ಸುತ್ತೋಲೆ ಹೊರಡಿಸಿ ಸೆ.30ರೊಳಗೆ ನೋಟು ವಿನಿಮಯ ಮಾಡಿಕೊಳ್ಳುವಂತೆ ಮುನ್ಸೂಚನೆ ಕೊಟ್ಟಿದ್ದು, ಬಳಿಕ ಒಂದು ವಾರದ ಮಟ್ಟಿಗೆ ವಿಸ್ತರಿಸಿತ್ತು.

ಅಕ್ಟೋಬರ್ 8ರ ನಂತರ 2 ಸಾವಿರ ರೂ ನೋಟುಗಳನ್ನು ಸ್ವೀಕರಿಸಿ ಅವುಗಳನ್ನು ಗ್ರಾಹಕರ ಖಾತೆಗೆ ಜಮೆ ಮಾಡುವುದು ಅಥವಾ ಬೇರೆ ಮುಖಬೆಲೆ ನೋಟುಗಳ ಜತೆ ವಿನಿಮಯ ಮಾಡುವುದನ್ನು ಬ್ಯಾಂಕುಗಳು ನಿಲ್ಲಿಸಲಿವೆ.

Check Also

ಕುಂದಾಪುರ : ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ವಾರದ ಬಳಿಕ ಪತ್ತೆ

ಕುಂದಾಪುರ : ಕಳೆದ ಬುಧವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಸಮುದ್ರ ತೀರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ತುಮಕೂರು ಮೂಲದ …

Leave a Reply

Your email address will not be published. Required fields are marked *

You cannot copy content of this page.