ಕಾರ್ಕಳ : ಬೈಕ್ ಟಿಪ್ಪರ್ ಗೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಮಾಳ ಘಾಟಿಯ ಅಬ್ಬಾಸ್ ಕಟ್ಟಿಂಗ್ ಎಂಬಲ್ಲಿ ಫೆ.5ರಂದು ನಡೆದಿದೆ.ಬೈಕ್ ಸವಾರ ಸಾಕ್ಷತ್ ಹಾಗೂ ಸಹಸವಾರ ಸತೀಶ್ ಗಾಯಗೊಂಡವರು.
ಸಾಕ್ಷತ್ ತನ್ನ ಬೈಕಿನಲ್ಲಿ ಸತೀಶ ಅವರೊಂದಿಗೆ ಎಸ್‌ಕೆ ಬಾರ್ಡರ್ ಕಡೆಯಿಂದ ಮಾಳ ಕಡೆಗೆ ಹೋಗುತ್ತಿದ್ದಾಗ ಅಬ್ಬಾಸ್ ಕಟ್ಟಿಂಗ್ ಎಂಬಲ್ಲಿ ರಸ್ತೆಯ ತಿರುವಿನಲ್ಲಿ ತೀರಾ ಬಲಭಾಗಕ್ಕೆ ಬಂದು ಮಾಳ ಕಡೆಯಿಂದ ಎಸ್‌ಕೆ ಬಾರ್ಡರ್ ಕಡೆಗೆ ಹೋಗುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ರಭಸಕ್ಕೆ ಬೈಕ್ ಟಿಪ್ಪರ್‌ನ ಚಕ್ರದ ಅಡಿಗೆ ಸಿಲುಕಿದ ಪರಿಣಾಮ ಬೈಕ್ ಸವಾರ ಸಾಕ್ಷತ್ ಗಂಭೀರವಾಗಿ ಗಾಯಗೊಂಡಿದ್ದು, ಸಹಸವಾರ ಸತೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.