ಢಾಕಾ: ವಾಯವ್ಯ ಬಾಂಗ್ಲಾದೇಶದ 14 ಹಿಂದೂ ದೇವಾಲಯಗಳನ್ನು ಅಪರಿಚಿತ ದುಷ್ಕರ್ಮಿಗಳು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಠಾಕೂರ್‌ಗಾಂವ್‌ನ ಬಲಿಯಾದಂಗಿ ಉಪಜಿಲಾದಲ್ಲಿನ ಹಿಂದೂ ಸಮುದಾಯದ ಮುಖಂಡ ವಿದ್ಯಾನಾಥ್ ಬರ್ಮನ್ ಮಾತನಾಡಿ, ‘ಅಪರಿಚಿತ ದುಷ್ಕರ್ಮಿಗಳು ರಾತ್ರೋರಾತ್ರಿ ದಾಳಿ ನಡೆಸಿ 14 ದೇವಾಲಯಗಳ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ.
ಅಪರಾಧಿಗಳನ್ನು ಇನ್ನೂ ಗುರುತಿಸಲಾಗಿಲ್ಲ. ಅವರಿಗೆ ಶೀಘ್ರವೇ ಶಿಕ್ಷೆಯಾಗಬೇಕು ಎಂದು ನಾವು ಬಯಸುತ್ತೇವೆ’ ಎಂದು ಹೇಳಿದ್ದಾರೆ.
ಬಲಿಯಡಂಗಿ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಖೈರುಲ್ ಅನಮ್ ಮಾತನಾಡಿ, ಶನಿವಾರ ರಾತ್ರಿ ಮತ್ತು ಭಾನುವಾರ ಮುಂಜಾನೆ ಹಲವಾರು ಗ್ರಾಮಗಳಲ್ಲಿ ದಾಳಿಗಳು ನಡೆದಿವೆ. ಆರೋಪಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.