BIGG NEWS : ಕೇಸರಿ ಶಾಲೆಗಾಗಿ ಹಿಂದೂಪರ ಸಂಘಟನೆಗಳಿಂದ ಅಭಿಯಾನ!

ಬೆಂಗಳೂರು : ಹಿಜಾಬ್, ಹಲಾಲ್ ಕಟ್, ಅಜಾನ್ ಬಳಿಕ ರಾಜ್ಯದಲ್ಲಿ ಮತ್ತೊಂದು ಧರ್ಮ ದಂಗಲ್ ಶುರುವಾಗಿದ್ದು, ರಾಜ್ಯದಲ್ಲಿ ಮದರಸಾ ಬ್ಯಾನ್ ಮಾಡದಿದ್ದರೆ ಕೇಸರಿ ಶಾಲೆಗಳನ್ನು ಆರಂಭಿಸಬೇಕು ಎಂದು ಹಿಂದೂ ಸಂಘಟನೆಗಳು ಅಭಿಯಾನಕ್ಕೆ ಮುಂದಾಗಿವೆ.

ರಾಜ್ಯದಲ್ಲಿ ಮದರಸಾಗಳನ್ನು ನಿಷೇಧ ಮಾಡಿ ಇಲ್ಲವೇ ಕೇಸರಿ ಶಾಲೆ ಆರಂಭಿಸಿ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಮದರಸಾಗಳನ್ನು ನಿಷೇಧ ಮಾಡಲಾಗಿದೆ. ಕರ್ನಾಟಕದಲ್ಲೂ ಮದಸರಾಸಗಳನ್ನು ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಕೇಸರಿ ಶಾಲೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೇಸರಿ ಶಾಲೆಗಳಲ್ಲಿ ಪ್ರತ್ಯೇಕ ಪಠ್ಯ ಇರಬೇಕು. ಪಠ್ಯ ಪುಸ್ತಕಗಳಲ್ಲಿ ಹಿಂದುತ್ವದ ಹಿನ್ನೆಲೆ ಇರುವ ಪಾಠಗಳು ಜೊತೆಗೆ ಹಿಂದುತ್ವದ ಹಿನ್ನೆಲೆ ಇರುವ ಪ್ರಾಧ್ಯಾಪಕರು ಇರಬೇಕು, ಕೇಸರಿ ಕಾಲೇಜಿಗೆ ಕೇಸರಿ ಬಣ್ಣ, ಎಲ್ಲಾ ವಿದ್ಯಾರ್ಥಿಗಳು ಕೇಸರಿ ಬಣ್ಣದ ಸಮವಸ್ತ್ರ ಇರಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.

Check Also

ಜುಲೈ.23ರಂದು 2024-25ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ( Union Budget ) ಜುಲೈ 23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ತಿನ …

Leave a Reply

Your email address will not be published. Required fields are marked *

You cannot copy content of this page.