December 21, 2024
WhatsApp Image 2022-12-05 at 9.19.42 AM

ಕಾರ್ಕಳ: ಬಸ್ಸಿಗೆ ಹತ್ತುವಾಗ ನಿಯಂತ್ರಣ ತಪ್ಪಿ ಚಕ್ರದಡಿಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಹಿರ್ಗಾನದ ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಡಿ.೦೪ ರ ಭಾನುವಾರ ಸಂಜೆ ನಡೆದಿದೆ. ಮೃತಪಟ್ಟಿರುವ ವ್ಯಕ್ತಿ ಚಿಕ್ಕಲ್ ಬೆಟ್ಟಿನ ಕೃಷ್ಣ ನಾಯಕ್(71) ಎಂದು ಗುರುತಿಸಲಾಗಿದೆ.

ಇವರು ಹಿರ್ಗಾನದಿಂದ ಚಿಕ್ಕಲ್ ಬೆಟ್ಟು ಕ್ರಾಸ್’ಗೆ ಹೋಗಲು ಬಸ್ಸು ಹತ್ತುವ ವೇಳೆ ಈ ಘಟನೆ ಸಂಭವಿಸಿದೆ.

ತಕ್ಷಣವೇ ಅಂಬ್ಯುಲೆನ್ಸ್(108) ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು ದುರಾದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ

About The Author

Leave a Reply

Your email address will not be published. Required fields are marked *

You cannot copy content of this page.