ಉಡುಪಿ : ಕುಂದಾಪುರ ಸಹಾಯಕ ಆಯುಕ್ತರಾಗಿ ರಶ್ಮಿ ಎಸ್.ಆರ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
2014ನೇ ಬ್ಯಾಚ್ ಕೆ.ಎ.ಎಸ್ ಅಧಿಕಾರಿಯಾಗಿರುವ ರಶ್ಮಿ ಎಸ್. ಆರ್ ಮೂಲತಃ ಮಂಗಳೂರಿನವರು. ಅವರು 2017ರಲ್ಲಿ ಸೇವೆಗೆ ಸೇರಿದ್ದು ದ.ಕ ಜಿಲ್ಲೆಯಲ್ಲಿ ಪ್ರೊಬೇಷನರ್ ಅವಧಿ ಮುಗಿಸಿ 2019ರಲ್ಲಿ ಬಂಟ್ವಾಳ ತಹಶೀಲ್ದಾರ್ ಆಗಿದ್ದು, ಲೋಕಸಭಾ ಹಾಗೂ ಗ್ರಾ.ಪಂ ಚುನಾವಣೆ ಸಮಯದಲ್ಲಿ ಕಾಪು ತಹಶೀಲ್ದಾರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಬಳಿಕ ಬಂಟ್ವಾಳಕ್ಕೆ ವಾಪಾಸ್ಸಾಗಿದ್ದು 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದು ಪ್ರಸ್ತುತ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕುಂದಾಪುರ ಎಸಿಯಾಗಿದ್ದ ಕೆ. ರಾಜು ಅವರು ಮಂಗಳೂರು ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.