ಉಡುಪಿ: ಉದ್ಯಾವರದ ಹಲೀಮಾ ಸಾಬ್ಜು ಆಡಿಟೋರಿಯಂ ಎದುರು ದ್ವಿಚಕ್ರ ವಾಹನವೊಂದು ನಿಂತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದು, ಆತನ ತಾಯಿ ಗಾಯಗೊಂಡಿದ್ದಾರೆ. ಮೃತ ಯುವಕನನ್ನು ಉಚ್ಚಿಲ ಪೊಲ್ಯ ನಿವಾಸಿ ಅಝೀಜ್ ಎಂಬವರ ಪುತ್ರ ಮುಫ್ರೀನ್ (18 ) ಎಂದು ಗುರುತಿಸಲಾಗಿದ್ದು, ಆತನ ತಾಯಿ ಹಾಜಿರಾ ಭಾನು ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಜ್ಮಾಡಿಯಿಂದ ಮುಫ್ರೀನ್ ತನ್ನ ತಾಯಿಯನ್ನು ಹೈಟೆಕ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದ್ವಿಚಕ್ರ ವಾಹನವೊಂದರಲ್ಲಿ ಕರೆದೊಯ್ಯುತ್ತಿದ್ದ ವೇಳೆ ಉದ್ಯಾವರ ಹಲೀಮಾ ಸಾಬ್ಜು ಆಡಿಟೋರಿಯಂ ಮುಂದೆ ನಿಲ್ಲಿಸಲಾಗಿದ್ದ ಬೊಲೆರೋ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಮುಫ್ರೀನ್ ಗಂಭೀರ ಗಾಯಗೊಂಡಿದ್ದರು.ತಕ್ಷಣ ಆತನನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಆತನ ತಾಯಿ ಹಾಜಿರಾ ಭಾನು ಗಂಭೀರ ಗಾಯಗೊಂಡಿದ್ದು, ಅವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.