

ಪುತ್ತೂರು : ಅಪಪ್ರಚಾರಕ್ಕೆ ಮನನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕಾಣಿಯೂರಿನಲ್ಲಿ ನಡೆದಿದೆ.
ಕಾಣಿಯೂರು ಗ್ರಾಮದ ಅನಿಲ ಮನೆ ಪದ್ಮಯ್ಯ ಗೌಡ ಅವರ ಪುತ್ರಿ ದಿವ್ಯಾ ಶ್ರೀ(26) ಜೀವಾಂತ್ಯ ಮಾಡಿಕೊಂಡ ಯುವತಿಯಾಗಿದ್ದಾಳೆ. ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದು, ತಕ್ಷಣ ಗಮನಿಸಿದ ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ದಿವ್ಯಾ ಶ್ರೀ ಮೃತಪಟ್ಟರೆನ್ನಲಾಗಿದೆ.
ಅಪಪ್ರಚಾರಕ್ಕೆ ಮನನೊಂದು ದಿವ್ಯಾ ಜೀವಾಂತ್ಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯುವತಿಯ ತಂದೆ ಪದ್ಮಯ್ಯ ಗೌಡ ಅನಿಲ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ