ಹೈದರಬಾದ್ : ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಇದೀಗ ಮೂರನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಕುತೂಹಲ ಮೂಡಿಸಿದೆ.
ಈವರೆಗೂ ತಮ್ಮ ಖಾಸಗಿ ಬದುಕಿನ ಬಗ್ಗೆ ಏನೂ ಹೇಳಿಕೊಳ್ಳದೇ ಶ್ರೀಜಾ ಇದೀಗ ಏಕಾಏಕಿಯಾಗಿ ಇನ್ಸ್ಟಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಡಿಯರ್ 2022, ನೀನು ನನ್ನ ಜೀವನಕ್ಕೆ ಹೊಸ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದೀಯಾ. ಅವನ ಭೇಟಿ ನಿಜಕ್ಕೂ ಒಂದು ಅದ್ಭುತ ಪಯಣವನ್ನೇ ಆರಂಭಿಸಲಿದೆ’ ಎಂದು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ ಮಗಳು ಈ ಮೊದಲು ಶ್ರೀಜಾಗೆ ಸಿರೀಶ್ ಭಾರಧ್ವಜ್ ಎಂಬ ಹುಡುಗನ ಜೊತೆ ಲವ್ ಮಾಡಿ ಮದುವೆಯಾಗಿದ್ದರು.ಆದರೆ ಈ ಪ್ರೀತಿಯ ಮದುವೆ ತುಂಬಾ ದಿನ ಉಳಿಯಲಿಲ್ಲ. ಮತ್ತೆ ತವರು ಮನೆಗೆ ಬಂದ ಶ್ರೀಜಾ, ಗಂಡನು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ 2011ರಲ್ಲಿ ಡಿವೋರ್ಸ್ ಪಡೆದುಕೊಂಡರು. ಅಲ್ಲಿಗೆ ಮೊದಲ ಮದುವೆ ಮುರಿದು ಬಿದ್ದಿತ್ತು.