ಅಪರಿಚಿತ ಯುವತಿ ಶವಪತ್ತೆ : ಪ್ಲಾಸ್ಟಿಕ್‌ ಕವರ್‌ನಲ್ಲಿ ಇಟ್ಟು ಸೀಲ್‌…!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಯಶವಂತ ಪುರ ರೈಲ್ವೆ ಸ್ಟೇಷನ್‌ ಬಳಿ ಅಪರಿಚಿತ ಯುವತಿಯ ಶವಪತ್ತೆವೊಂದು ಪತ್ತೆಯಾಗಿದ್ದು, ಭಾರೀ ಆತಂಕ , ಅನುಮಾನಕ್ಕೆ ಕಾರಣವಾಗಿದೆ.

23 ವರ್ಷದ ಮಹಿಳೆಯ ಶವ ಎಂದು ಗುರುತಿಸಲಾಗಿದೆ. ಯಶವಂತ ಪುರ ರೈಲ್ವೆ ನಿಲ್ಞಾಣ ಗೋಡ್ಸ್‌ ಪ್ಲಾಟ್‌ ಫಾರಂ ಬಳಿ ಮಹಿಳೆಯ ಶವವೂ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್‌ ಕವರ್‌ನಲ್ಲಿ ಇಟ್ಟು ಸೀಲ್‌ ಮಾಡಿದಂತೆ ಪತ್ತೆಯಾಗಿದೆ. ಕಳೆದ ಎರಡು ಮೂರು ದಿನಗಳಿಂದ ಗೋಡ್ಸ್‌ ಪ್ಲಾಟ್‌ ಫಾರಂ ಬಳಿ ಇಡಲಾಗಿತ್ತು. ಇಂದು ವಾಸನೆ ಬಂದ ಕಾರಣ ತೆಗೆದು ನೋಡಿದಾಗ ಮಹಿಳೆ ಶವವೊಂದು ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ . ಇದೀಗ ಪತ್ತೆ ಶವ ಯಾರದ್ದು, ಎಲ್ಲಿಯವರು, ಮಹಿಳೆಯನ್ನು ಕೊಂದು ಪಾರ್ಸೆಲ್‌ ಬಂದಿರುವುದೇ ? ಯಾರಾದರೂ ಎಸೆದು ಹೋಗಿದ್ದಾರಾ? ಹೀಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಹಿಂದೆಯೂ ಡಿಸೆಂಬರ್‌ ತಿಂಗಳಿನಲ್ಲೂ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು, ಬೈಯಪ್ಪನ ಹಳ್ಳಿ ರೈಲ್ವೆ ನಿಲ್ದಾಣದಲ್ಲೂ ಮಹಿಳೆಯ ಶವ ಪತ್ತೆಯಾಗಿತ್ತು ಎಂದು ತಿಳಿದುಬಂದಿದೆ. ಹೀಗೆ ಅಪರಿಚಿತ ಯುವತಿಯ ಶವ ಪತ್ತೆಯಾಗುವುದು ಹೆಚ್ಚಾದ ಬೆನ್ನಲ್ಲೆ ಬೆಂಗಳೂರಿಗರಿಗೆ ಮತ್ತೊಂದು ಆತಂಕ ಸೃಷ್ಟಿಯಾಗಿದಂತೂ ನಿಜ.

Check Also

ಪೆನ್‌ಡ್ರೈವ ಹಂಚಿಕೆ ಪ್ರಕರಣ – ಕೊನೆಗೂ ಅರೆಸ್ಟ್ ಆದ ಸಚಿವ ಜಮೀರ್ ಶಿಷ್ಯ ನವೀನ್, ಚೇತನ್

ಬೆಂಗಳೂರು : ಹಾಸನ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಆರೋಪದಲ್ಲಿ ಸಚಿವ ಜಮೀರ್ ಶಿಷ್ಯ ನವೀನ್ ಗೌಡ ಹಾಗೂ ಚೇತನ್‌ನನ್ನ …

Leave a Reply

Your email address will not be published. Required fields are marked *

You cannot copy content of this page.