ಮಹಿಳಾ ಸಬ್ ಇನ್ಸ್ಪೆಕ್ಟರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ನಡುವಿನ ಪ್ರೇಮ್ ಕಹಾನಿ ಪ್ರಕರಣ ತೆಲಂಗಾಣದ ವಾರಂಗಲ್ನಲ್ಲಿ (Warangal) ಭಾರಿ ಚರ್ಚೆ ಹುಟ್ಟುಹಾಕಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಇಬ್ಬರನ್ನೂ ವಾರಂಗಲ್ ಪೊಲೀಸ್ ಕಮಿಷನರ್ ರಂಗನಾಥ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಮಾನತಾದ ಅಧಿಕಾರಿಗಳು ಗೆಸಿಗೊಂಡ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಾಯಲ ವೆಂಕಟೇಶ್ವರಲು ಮತ್ತು ದಮೇರಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರಿಪ್ರಿಯಾ ಎಂದು ವರದಿಯಾಗಿದೆ.
ಎಸ್ಐ ಹರಿಪ್ರಿಯಾ ಅವರ ಮದುವೆ ಇತ್ತೀಚೆಗಷ್ಟೇ ಆಗಿದೆ. ಆದರೂ ಮೊದಲಿನಿಂದಲೂ ಪರಿಚಯವಿದ್ದ ಸಿಐ ವೆಂಕಟೇಶ್ವರಲು ಜೊತೆ ತಮ್ಮ ರೊಮ್ಯಾನ್ಸ್ ಮುಂದುವರಿಸಿದ್ದರು. ಪತ್ನಿ ಹರಿಪ್ರಿಯಾ ವರ್ತನೆಯ ಬಗ್ಗೆ ಅನುಮಾನಗೊಂಡ ಗಂಡ, ಆಕೆಯ ವಾಟ್ಸ್ಆಯಪ್ ಚಾಟ್ ಅನ್ನು ಗಮನಿಸಿದ್ದ. ಸಿಐ ಮತ್ತು ಎಸ್ಐ ನಡುವೆ ತುಂಬಾ ಸಲುಗೆಯ ಚಾಟಿಂಗ್ ನಡೆಯುತ್ತಿತ್ತು. ಇದನ್ನರಿತ ಹರಿಪ್ರಿಯಾ ಗಂಡ ವಾರಂಗಲ್ ಕಮಿಷನರ್ಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸ್ ಕಮಿಷನರ್ಗೆ ಸಿಐ ಮತ್ತು ಎಸ್ಐ ನಡುವೆ ಲವ್ವಿಡವ್ವಿ ಇರುವುದು ತಿಳಿದಿದೆ. ತಕ್ಷಣವೇ ಇಬ್ಬರನ್ನು ಅಮಾನತು (Suspend) ಮಾಡುವ ಮೂಲಕ ಕ್ರಮ ಜರುಗಿಸಿದ್ದಾರೆ ಎಂದು ವರದಿಯಾಗಿದೆ.