ಮುಂಬೈ: ತನ್ನ ಪತ್ನಿಯೊಂದಿಗೆ ಜಗಳವಾಡಿ, ಕೋಪದ ಭರದಲ್ಲಿ ಪತಿಯೊಬ್ಬ ತನ್ನ ನವಜಾತ ಶಿಶುವನ್ನು ಆಸ್ಪತ್ರೆಯ ನೆಲಕ್ಕೆ ಕೆಳಗೆ ಎಸೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ನಾಗ್ಪುರ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಅಮರಾವತಿ ಮೂಲದ ವ್ಯಕ್ತಿಯು 2020ರಲ್ಲಿ ಮದುವೆಯಾಗಿದ್ದ. ಅಂದಿನಿಂದ ಆತ ಪತ್ನಿಯ ಚಾರಿತ್ರ್ಯದ ಮೇಲೆ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದ. ಆದರೆ ಡಿ. 30ರಂದು ಆಕೆ ಮಗುವಿಗೆ ಜನ್ಮ ನೀಡಿದ್ದಳು.
ಈ ಹಿನ್ನೆಲೆಯಲ್ಲಿ ಆಕೆಯನ್ನು ಭೇಟಿ ಮಾಡಲು ಆಸ್ಪತ್ರೆಗ ಬಂದಿದ್ದ ವ್ಯಕ್ತಿಯು ಅಲ್ಲಿಯೂ ಜಗಳವಾಡಿದ್ದಾನೆ. ನಂತರ ಕೋಪದ ಭರದಲ್ಲಿ ನವಜಾತ ಶಿಶುವನ್ನು ನೆಲಕ್ಕೆ ಎಸೆದಿದ್ದಾನೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.