December 26, 2024
WhatsApp Image 2024-12-01 at 5.41.21 PM

ಬೆಂಗಳೂರು : ರಾಜ್ಯದಲ್ಲಿ ಖಡ್ಡಾಯವಾಗಿ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗ ಮಾಡಬೇಕು ಎಂದು ಸರ್ಕಾರ ಈಗಾಗಲೇ ಆದೇಶಿಸಿದ್ದು, ಇದಕ್ಕಾಗಿ ಗಡುವನ್ನೂ ನೀಡಿತ್ತು. ಇದೀಗ ಈ ಅವಧಿಯನ್ನು ಮತ್ತಷ್ಟು ವಿಸ್ತರಿಸಿ ಆದೇಶಿಸಿದೆ. ಈ ಹಿಂದೆ ಡಿಸೆಂಬರ್ 4ಕ್ಕೆ ಕೊನೇ ದಿನಾಂಕ ನೀಡಿತ್ತು. ಆದರೆ ಇದೀಗ ಮತ್ತೆ ರಾಜ್ಯ ಸರ್ಕಾರ ಗುಡುವನ್ನು ವಿಸ್ತರಣೆ ಮಾಡಲು ಮುಂದಾಗಿದೆ.

ಈ ಬಗ್ಗೆ ಇಂದು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು,HSRP ನಂಬರ್ ಪ್ಪ್ಲೇಟ್ ಗಳನ್ನು ಮಾಲೀಕರು ತಮ್ಮ ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಲು ಈ ಹಿಂದೆ ಆಗಸ್ಟ್ 17ರವರೆಗೆ ಅವಕಾಶ ನೀಡಲಾಗಿತ್ತು.ಆ ನಂತರ ಈ ಅವಧಿಯನ್ನು ದಿನಾಂಕ ನವೆಂಬರ್ 30ರವರೆಗೆ ವಿಸ್ತರಿಸಲಾಗಿತ್ತು. ಆ ನಂತರ ಮತ್ತೆ ಇತ್ತೀಚೆಗಷ್ಟೇ ಹೈಕೋರ್ಟ್ ಡಿಸೆಂಬರ್ 3ರ ವರಗೆ ಗಡುವು ನೀಡಿತ್ತು.

ಇದೀಗ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ನೋಂದಣಿಯ ಕೊನೆಯ ದಿನಾಂಕವನ್ನು 2024ರ ಡಿಸೆಂಬರ್ 31ರ ವರೆಗೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ 5ನೇ ಬಾರಿಗೆ ಗಡುವು ವಿಸ್ತರಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.