December 22, 2024
WhatsApp Image 2022-12-02 at 9.04.47 AM

ಮಂಗಳೂರು: ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಖ್ ಮತ್ತು ಅವನಿಗೆ ಸಹಕರಿಸಿದ ಆರೋಪಿಗಳ ಪರ ಮಾನ್ಯ ನ್ಯಾಯಾಲಯದಲ್ಲಿ ಯಾವ ವಕೀಲರು ಕೂಡ ವಕಾಲತ್ತು ನಡೆಸಬಾರದಾಗಿ ಆಗ್ರಹಿಸಿ ಬಜರಂಗದಳ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಿಗೆ ಮನವಿ ನೀಡಿದೆ.

ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ನೇತೃತ್ವದ ನಿಯೋಗ ವಕೀಲರ ಸಂಘದ ಅಧ್ಯಕ್ಷರನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದೆ. ಮೊಹಮ್ಮದ್ ಶಾರೀಕ್ ಎಂಬಾತ ನಗರದಲ್ಲಿ ಕಳೆದ ವಾರ ನಡೆಸಿದ ಬಾಂಬ್‌ ಬ್ಲಾಸ್ಟ್ ನ ಕೃತ್ಯದಿಂದ ಮಂಗಳೂರಿನ ಜನತೆ ಹೆದರಿಕೆಯಿಂದ ಸಮಾಜದಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಹಲವು ಮೂಲಗಳಿಂದ ಮತ್ತು ಪತ್ರಿಕೆಗಳಲ್ಲಿನ ಮಾಹಿತಿಯಿಂದ ಶಾರೀಕ್ ಐಸಿಸ್ ನಂತಹ ಉಗ್ರ ಸಂಘಟನೆಯೊಂದಿಗೆ ಸಂಪರ್ಕವನ್ನು ಹೊಂದಿದ್ದನು ಎಂಬ ವಿಚಾರವು ನಮ್ಮ ಗಮನಕ್ಕೆ ಬಂದಿರುತ್ತದೆ.ಇಂತಹ ಸನ್ನಿವೇಶಗಳಿಂದ ನಮ್ಮ ನಾಗರಿಕರಿಗೆ ಅಭದ್ರತೆಯ ಕೊರತೆ ಎದ್ದುಕಾಣುತ್ತಿದೆ.ಹಾಗೆಯೆ ಸಮಾಜದಲ್ಲಿನ ಶಾಂತಿಯನ್ನು ಹಾಳುಮಾಡುವ ಉದ್ದೇಶ ಮತ್ತು ಈ ನೆಲದ, ಈ ದೇಶದ ಕಾನೂನನ್ನು ಗೌರವಿಸದೆ ಇರುವುದು ಇಂತಹ ಕೃತ್ಯಗಳು ಮರುಕಳಿಸುವಂತಾಗಿದೆ. ಆದ್ದರಿಂದ, ಸಮಾಜದಲ್ಲಿ ಶಾಂತಿ ಕದಡುವ ಹಾಗು ಈ ನೆಲದ, ಈ ದೇಶದ ಕಾನೂನನ್ನು ಗೌರವಿಸದ ಮತ್ತು ಭಯೋತ್ಪಾದನೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪಿ ಪರವಾಗಿ ಮಾನ್ಯ ನ್ಯಾಯಾಲಯದಲ್ಲಿ ಸಂಘದ ಪದಾಧಿಕಾರಿಗಳೇ ಆಗಲಿ ಅಥವಾ ಸದದಸ್ಯರುಗಳೇ ಆಗಲಿ ಅಥವಾ ಇನ್ಯಾವುದೇ ಜಿಲ್ಲೆಯ ನ್ಯಾಯವಾದಿಗಳೇ ಆಗಲಿ ಆರೋಪಿಯ ಪರ ವಕಾಲತ್ತು ನಡೆಸದಾಗಿ ಕರೆ ನೀಡಬೇಕು. ಈ ಮೂಲಕ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವಂತಹ ತಾವುಗಳು ಸಮಾಜಘಾತುಕರ ವಿರುದ್ಧ ಕಾನೂನು ಸಮರಕ್ಕೆ ಸಹಕಾರ ನೀಡಬೇಕೆಂದು ಎಂದು ಬಜರಂಗದಳ ಮನವಿ ಮಾಡಿದೆ.

About The Author

Leave a Reply

Your email address will not be published. Required fields are marked *

You cannot copy content of this page.