December 22, 2024
WhatsApp Image 2022-12-02 at 9.24.33 AM

ಬೆಳಗಿನ ಉಪಾಹಾರ ಅತ್ಯಂತ ಮುಖ್ಯ. ಕೆಲವರು ಬೆಳಗ್ಗೆ ಉಪಾಹಾರ ಸೇವಿಸುವುದೇ ಇಲ್ಲ. ಟೀ-ಕಾಫಿ ಕುಡಿದುಕೊಂಡು ಹಾಗೇ ಇದ್ದುಬಿಡುತ್ತಾರೆ. ಈ ರೀತಿ ಮಾಡುವುದರಿಂದ ನೀವು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಬೆಳಗಿನ ಉಪಾಹಾರವನ್ನು ಸೇವಿಸದೆ ಇದ್ದರೆ ಹೃದಯವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು. ಬೆಳಗಿನ ಉಪಾಹಾರವನ್ನು ಸೇವಿಸದೆ ಇರುವುದರಿಂದ ಇನ್ನೂ ಸಾಕಷ್ಟು ಅನಾನುಕೂಲತೆಗಳಿವೆ, ಅವನ್ನೆಲ್ಲ ನೋಡೋಣ.

ಹೃದಯದ ಸಮಸ್ಯೆ: ಬೆಳಿಗ್ಗೆ ಉಪಾಹಾರವನ್ನು ಸೇವಿಸದೇ ಇದ್ದರೆ ರಕ್ತದೊತ್ತಡವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇದು ಅಪಧಮನಿಗಳ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಬೆಳಗಿನ ಉಪಾಹಾರವನ್ನು ಸೇವಿಸಲೇಬೇಕು.

ಮಧುಮೇಹ: ಬೆಳಗಿನ ಉಪಾಹಾರವನ್ನು ನಿರ್ಲಕ್ಷಿಸಿದರೆ ಅದು ಸಕ್ಕರೆ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ದುಡಿಯುವ ವರ್ಗದವರಲ್ಲಿ ಈ ಸಮಸ್ಯೆ ಹೆಚ್ಚು.

ತೂಕ ಹೆಚ್ಚಳ: ಬೆಳಗ್ಗೆ ತಿಂಡಿ ತಿನ್ನದೇ ಇದ್ದರೆ ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ನೀವು ವಿಪರೀತ ಹಸಿದಿರುತ್ತೀರಿ. ಹೆಚ್ಚು ಸ್ಯಾಚುರೇಟೆಡ್ ಕೊಬ್ಬು, ಕ್ಯಾಲೋರಿಗಳು ಮತ್ತು ಸಕ್ಕರೆಯನ್ನು ಸೇವಿಸಲು ಪ್ರಾರಂಭಿಸುತ್ತೀರಿ. ಈ ಕಾರಣದಿಂದಾಗಿ ತೂಕವು ವೇಗವಾಗಿ ಹೆಚ್ಚುತ್ತದೆ.

ಕ್ಯಾನ್ಸರ್ ಅಪಾಯ: ನೀವು ಬೆಳಗಿನ ಉಪಾಹಾರದೊಂದಿಗೆ ದಿನವನ್ನು ಪ್ರಾರಂಭಿಸದಿದ್ದರೆ, ಹಲವಾರು ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗಬಹುದು. ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಉಪಹಾರವನ್ನು ಎಂದಿಗೂ ಬಿಡಬಾರದು.

ಮೈಗ್ರೇನ್: ಬೆಳಗ್ಗೆ ತಿಂಡಿ ತಿನ್ನದೇ ಇದ್ದಾಗ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಿರುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ತಲೆನೋವನ್ನು ಪ್ರಚೋದಿಸುತ್ತದೆ.

ಶಕ್ತಿಯ ಮಟ್ಟ ಕುಸಿತ: ಬೆಳಗಿನ ಉಪಹಾರ ತ್ಯಜಿಸುವುದರಿಂದ ದಿನವಿಡೀ ಶಕ್ತಿಯ ಕೊರತೆಯನ್ನು ಅನುಭವಿಸುತ್ತೀರಿ. ನಿಮಗೆ ಸುಸ್ತಾದಂತೆನಿಸುತ್ತದೆ, ಇದರಿಂದಾಗಿ ಮೂಡ್ ಕೂಡ ಚೆನ್ನಾಗಿರುವುದಿಲ್ಲ.

About The Author

Leave a Reply

Your email address will not be published. Required fields are marked *

You cannot copy content of this page.