October 22, 2024
WhatsApp Image 2024-04-02 at 4.58.14 PM

26 ವರ್ಷ ವಯಸ್ಸಿನ ಕ್ರಿಸ್ಟಿನಾ ಓಜ್‌ಟುರ್ಕ್ ಎಂಬ ಯುವತಿ ತನ್ನ 58 ವರ್ಷ ವಯಸ್ಸಿನ ಪತಿ ಗ್ಯಾಲಿಪ್​ನೊಂದಿಗೆ 22 ಮಗುವನ್ನು ಆರೈಕೆ ಮಾಡುತ್ತಿದ್ದು, ಕೇವಲ 26ನೇ ವಯಸ್ಸಿಗೆ 22 ಮಕ್ಕಳಿಗೆ ತಾಯಿಯಾಗಿರುವುದು ಅನೇಕರಲ್ಲಿ ಭಾರೀ ಅಚ್ಚರಿಯನ್ನು ಮೂಡಿಸಿದೆ. 2020ರಿಂದ ಇಲ್ಲಿಯವರೆಗೆ 22 ಶಿಶುಗಳನ್ನು ಸ್ವಾಗತಿಸಿರುವ ಈ ದಂಪತಿ, 105 ಮಕ್ಕಳನ್ನು ಹೊಂದುವ ಮೂಲಕ ತಮ್ಮ ಕುಟುಂಬವನ್ನು ಮತ್ತಷ್ಟು ವಿಸ್ತರಿಸುವ ಕನಸು ಕಂಡಿದೆ.

ಪ್ರಸ್ತುತ ಜಾರ್ಜಿಯಾದಲ್ಲಿ ನೆಲೆಸಿರುವ ಕ್ರಿಸ್ಟಿನಾ ಒಜ್ಟುರ್ಕ್ ಮತ್ತು ಅವರ ಮಿಲಿಯನೇರ್ ಪತಿ ಗ್ಯಾಲಿಪ್ ಸದ್ಯ 22 ಮಗುವಿನ ಪೋಷಕರು. ಕ್ರಿಸ್ಟಿನಾ ತನ್ನ ಮೊದಲ ಮಗುವನ್ನು 17ನೇ ವಯಸ್ಸಿನಲ್ಲಿ ಸ್ವಾಗತಿಸಿದ್ದಾರೆ. ಈ ಹಿಂದೆ 2014ರಲ್ಲಿ ಮೊದಲ ಪತಿಗೆ ಜನಿಸಿದ ಒಂದು ಮಗುವನ್ನು ಇಂದಿಗೂ ಸಾಕುತ್ತಿರುವ ಕ್ರಿಸ್ಟಿನಾಗೆ ಒಟ್ಟು 22 ಮಕ್ಕಳಿದ್ದಾರೆ. 22ರ ಪೈಕಿ 20 ಮಕ್ಕಳು ದತ್ತು ಮಕ್ಕಳು ಎಂಬುದು ಶಾಕಿಂಗ್ ಸಂಗತಿ. ಯುವತಿ ತನ್ನ ಕುಟುಂಬವನ್ನು ವಿಸ್ತರಿಸುವ ನಿರ್ಧಾರ ಕೈಗೊಂಡಿದ್ದು, 105 ಶಿಶುವನ್ನು ಪಡೆಯುವುದೇ ನನ್ನ ಗುರಿ ಎಂದು ಹೇಳಿದ್ದಾರೆ.

ಫೆಬ್ರವರಿ 2021ರಲ್ಲಿ ಕ್ರಿಸ್ಟಿನಾ ತನ್ನ 105 ಮಕ್ಕಳನ್ನು ಹೊಂದುವ ಬಯಕೆ ವ್ಯಕ್ತಪಡಿಸಿದ್ದು, ಏಕಕಾಲದಲ್ಲಿ ಹಲವಾರು ಮಕ್ಕಳನ್ನು ಬೆಳೆಸುವ ಅನುಭವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ‘ನಾನು ಸದಾ ಮಕ್ಕಳೊಂದಿಗೆ ಇರುತ್ತೇನೆ. ಎಲ್ಲಾ ಅಮ್ಮಂದಿರು ಸಾಮಾನ್ಯವಾಗಿ ಏನೆಲ್ಲಾ ಕೆಲಸಗಳನ್ನು ಮಾಡ್ತಾರೋ ನಾನು ಸಹ ಅದನ್ನೇ ಮಾಡುತ್ತಿದ್ದೇನೆ’ ಎಂದಿದ್ದಾರೆ.

ಮಾರ್ಚ್ 2020ರಿಂದ ಜುಲೈ 2021ರವರೆಗೆ ಈ ದಂಪತಿ ಮಕ್ಕಳನ್ನು ದತ್ತು ಕೊಟ್ಟ ಪೋಷಕರಿಗೆ 168,000 ಯುರೋ​ ಹಣವನ್ನು ಪಾವತಿಸಿದ್ದಾರೆ. ಹೆಚ್ಚುವರಿಯಾಗಿ 16 ಲೈವ್-ಇನ್ ದಾದಿಯರಿಗೆ ವಾರ್ಷಿಕವಾಗಿ 96,000 ಡಾಲರ್​ ಹಣವನ್ನು ಮಕ್ಕಳ ಆರೈಕೆಗೆಂದೇ ವ್ಯಯಿಸುತ್ತಾರೆ. ಇಬ್ಬರನ್ನು ಹೊರತುಪಡಿಸಿ ಎಲ್ಲಾ ಮಕ್ಕಳು 2020ರಲ್ಲಿ ಜನಿಸಿವೆ. ಕ್ರಿಸ್ಟಿನಾ ಅವರ ಹಿರಿಯ ಮಗು ವಿಕ್ಟೋರಿಯಾ ಮೊದಲ ಪತಿಗೆ ಜನಿಸಿದೆ. ಇನ್ನು ಎರಡನೇ ಮಗು ಒಲಿವಿಯಾ 2021ರ ಜನವರಿಯಲ್ಲಿ ಹುಟ್ಟಿದೆ.

20 ಮಕ್ಕಳಲ್ಲಿ ಮುಸ್ತಫಾ, ಮರ್ಯಮ್, ಐರಿನ್, ಆಲಿಸ್, ಹಸನ್, ಜೂಡಿ, ಹಾರ್ಪರ್, ತೆರೇಸಾ, ಹುಸೇನ್, ಅನ್ನಾ, ಇಸಾಬೆಲ್ಲಾ, ಇಸ್ಮಾಯಿಲ್, ಮೆಹ್ಮೆತ್​ಗೆ ಮೂರು ವರ್ಷ ವಯಸ್ಸು. ಇನ್ನು ಅಹ್ಮತ್, ಅಲಿ, ಕ್ರಿಸ್ಟಿನಾ, ಅಲೆನಾ, ಸಾರಾ, ಲಾಕ್‌ಮನ್ ಮತ್ತು ಆಲ್ಪರ್ಸ್ಲಾನ್​ಗೆ ಎರಡು ವರ್ಷ ವಯಸ್ಸು. ದಂಪತಿಗಳು ತಮ್ಮ ಕುಟುಂಬವನ್ನು ಮತ್ತಷ್ಟು ವಿಸ್ತರಿಸಲು ಬಯಸಿದ್ದು, 100ಕ್ಕೂ ಹೆಚ್ಚು ಮಕ್ಕಳನ್ನು ಹೊಂದುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ದತ್ತು ಪಡೆಯುವ ಪ್ರಯಾಣವನ್ನು ಮುಂದುವರಿಸುವ ಮೊದಲು ಪ್ರಸ್ತುತ ಜನಿಸಿರುವ ಮಕ್ಕಳು ದೊಡ್ಡವರಾಗುವವರೆಗೆ ಈ ಪ್ಲ್ಯಾನ್ ಮುಂದೂಡಲು ಇದೀಗ ದಂಪತಿ ನಿರ್ಧರಿಸಿದ್ದಾರೆ,(ಏಜೆನ್ಸೀಸ್).

About The Author

Leave a Reply

Your email address will not be published. Required fields are marked *

You cannot copy content of this page.