ಮಂಗಳೂರು ತಾಲೂಕು ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಗುಣಿ ನದಿಯ ನೀರಿನ ಮಟ್ಟವು ನಿನ್ನೆ ರಾತ್ರಿ ಸುರಿದ ಭಾರಿ ಪ್ರಮಾಣದ ಮಳೆಗೆ ಜಾಸ್ತಿಯಾಗಿದ್ದು ನದಿ ಸಮೀಪದ ಗೀತಾ ವಿ ಶೆಟ್ಟಿ ಮಾಲೀಕತ್ವದ ಫಾರ್ಮ್ ಹೌಸ್ ಮುಳುಗಡೆಯಾಗಿದ್ದು, ಮನೆಯಲ್ಲಿದ್ದ ಕೆಲಸದಾಳುಗಳಾದ ದರ್ಣಪ್ಪ ನಾಯ್ಕ , ಕೌಶಲ್ಯ , ತೇಜಸ್ ಇವರು ಹೊರಗಡೆ ಬರಲು ಆಗದೆ ಮಹಡಿ ಮೇಲೆ ಹೋಗಿರುತ್ತಾರೆ .
ಘಟನಾ ಸ್ಥಳದ ಮಾಹಿತಿ ಪಡೆದುಕೊಂಡ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ಕೂಡಲೇ SDRF ರಕ್ಷಣಾ ಇಲಾಖೆ ಹಾಗೂ ಅಗ್ನಿಶಾಮಕ ದಳ ಇಲಾಖೆಗೆ ಕರೆ ಮಾಡಿ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ SDRF ಸುರೇಶ್ ಇವರ ರಕ್ಷಣಾ ತಂಡ ಹಾಗೂ ಅಗ್ನಿಶಾಮಕ ದಳದ ಕೆ.ವಿ ಗೌಡ ಇವರ ತಂಡವು ಬೋಟ್ ಮೂಲಕ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ನೆರಿದಿದ್ದ ಸ್ಥಳೀಯರು ಹಾಗೂ ನೆರೆಯಿಂದ ಸಿಲುಕಿದ್ದವರು ಗ್ರಾಮ ಪಂಚಾಯತ್ ಆಧ್ಯಕ್ಷರಿಗೆ ಹಾಗೂ ರಕ್ಷಣಾ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದರು .