ಮಂಗಳೂರು: ನಗರದಲ್ಲಿ ಎರಡು ದಿನಗಳ ಕಾಲ ನಡೆದ ನ್ಯಾಟ್ ಕಾಮ್ ಸಮಾವೇಶದಲ್ಲಿ ಅಕ್ರಮವಾಗಿ ಡಿಫೆನ್ಸ್ ಲಿಕ್ಕರ್ ಪೂರೈಕೆಯಾಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅಬಕಾರಿ ಪೊಲೀಸರು ತಿಳಿಸಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫರ್ಸನಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ವತಿಯಿಂದ ಎರಡು ದಿನಗಳ ನ್ಯಾಟ್ಕಾನ್ ಸಮಾವೇಶದ ಸಮಾರೋಪ ಶನಿವಾರ ನಡೆದಿತ್ತು. ರಾತ್ರಿ ಪಾರ್ಟಿಗೆ ಆಯೋಜಕರು ಅಬಕಾರಿ ಇಲಾಖೆಯಿಂದ ಸಿಎಲ್-5 (ಒಂದು ದಿನ) ಪರವಾನಿಗೆ ಪಡೆದಿದ್ದರು. ಆದರೆ ರಕ್ಷಣಾ (ಡಿಫೆನ್) ಇಲಾಖೆಯು ಗೋವಾದಿಂದ ಮದ್ಯಗಳನ್ನು ಅಕ್ರಮವಾಗಿ ತಂದು ವಿತರಣೆ ಮಾಡಿತ್ತು. ಅಬಕಾರಿ ನಿಯಮಗಳ ಪ್ರಕಾರ ಗೋವಾ ಮದ್ಯ ರಾಜ್ಯಕ್ಕೆ ತಂದು ಮಾರಾಟ ಮಾಡುವಂತಿಲ್ಲ. ಅಲ್ಲದೇ ಡಿಫೆನ್ (ರಕ್ಷಣಾ ಸಿಬ್ಬಂದಿ)ಗೆ ಸೀಮಿತವಾದ ಮದ್ಯ (ನಾಟ್ ಫಾರ್ ಸೇಲ್) ಮಾರಾಟಕ್ಕೆ ಅವಕಾಶವಿಲ್ಲ. ಆದರೂ ನಿಯಮ ಬಾಹಿರವಾಗಿ ನ್ಯಾಟ್‌ಾನ್ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಗೋವಾ ಮದ್ಯ ವಶಪಡಿಸಿಕೊಂಡಿದ್ದಾರೆ